Index   ವಚನ - 1488    Search  
 
ಮತಿಜ್ಞಾನ, ಶ್ರುತಿಜ್ಞಾನ, ಖಂಡಜ್ಞಾನ, ಕೇವಲಜ್ಞಾನ, ಜ್ಯೋತಿರ್ಜ್ಞಾನ, ಮಹಾಜ್ಯೋತಿರ್ಜ್ಞಾನವೆಂದಿಂತು ಜ್ಞಾನವಾರು ತೆರನು. ಮತಿಜ್ಞಾನದಿಂದ ಶ್ರುತಿಜ್ಞಾನವಹುದು, ಶ್ರುತಿಜ್ಞಾನದಿಂದ ಖಂಡಜ್ಞಾನವಹುದು. ಖಂಡಜ್ಞಾನದಿಂದ ಕೇವಲಜ್ಞಾನವಹುದು, ಕೇವಲಜ್ಞಾನದಿಂದ ಜ್ಯೋತಿರ್ಜ್ಞಾನವಹುದು. ಜ್ಞೋತಿರ್ಜ್ಞಾನದಿಂದ ಮಹಾಜ್ಯೋತಿರ್ಜ್ಞಾನವಹುದು. ಮತಿಜ್ಞಾನವೆ ಭಕ್ತ, ಶ್ರುತಿಜ್ಞಾನವೆ ಮಹೇಶ್ವರ, ಖಂಡಜ್ಞಾನವೆ ಪ್ರಸಾದಿ, ಕೇವಲಜ್ಞಾನವೆ ಪ್ರಾಣಲಿಂಗಿ, ಜ್ಯೋತಿರ್ಜ್ಞಾನವೆ ಶರಣ, ಮಹಾಜ್ಯೋತಿರ್ಜ್ಞಾನವೆ ಐಕ್ಯ. ಈ ಷಟ್‍ಸ್ಥಲದ ನೆಲೆಯ ಬಲ್ಲಾತನೆ ಕೂಡಲಚೆನ್ನಸಂಗಯ್ಯನಲ್ಲಿ ಐಕ್ಯನು.