Index   ವಚನ - 1524    Search  
 
ಮಾಯೆವಿಡಿದು ಜೀವಿಸುವ ಜೀವಕನಲ್ಲ; ಅದೇನು ಕಾರಣವೆಂದಡೆ: ಆತ ಘನಲಿಂಗವಿಡಿದು ಜೀವಿಸುವ ಜೀವಕನಾಗಿ. ವಿಷಯವಿಡಿದು ಭುಂಜಿಸುವ ಭುಂಜಕನಲ್ಲ; ಅದೇನು ಕಾರಣವೆಂದಡೆ: ಆತ ಮಹಾಪ್ರಸಾದವಿಡಿದು ಭುಂಜಿಸುವ ಭುಂಜಕನಾಗಿ. ವೇಷವಿಡಿದು ರಂಜಿಸುವ ರಂಜಕನಲ್ಲ; ಅದೇನು ಕಾರಣವೆಂದಡೆ: ಆತ ಸಹಜವಿಡಿದು ರಂಜಿಸುವ ರಂಜಕನಾಗಿ. ಇಂತೀ ತ್ರಿವಿಧವಿಡಿದು ಪರಮಾರ್ಥದಲ್ಲಿ ಆಚರಿಸುವ ಶರಣಂಗೆ ಶರಣೆಂಬೆನು ಕೂಡಲಚೆನ್ನಸಂಗಮದೇವಾ.