Index   ವಚನ - 1560    Search  
 
ಲಿಂಗಕ್ಕೆ ಬಾರದ ರುಚಿಯ ಜಂಗಮಕ್ಕೆ ಸಲ್ಲಿಸಲೆಂತಯ್ಯ. ನೀಡಿ ಪ್ರಸಾದವನಿಕ್ಕೆಂಬಿರಿ. ಅದು ಪ್ರಸಾದವಲ್ಲ. ಸಿಂಗಿ ಕಾಳಕೂಟವಿಷ. ಕೇಳಿರಣ್ಣಾ, ಪ್ರಸಾದ ಪ್ರಸಾದವೆಂಬಿರಿ ಆ ಪ್ರಸಾದ[ವನೇ]ನೆಂಬೆ ಕೂಡಲಚೆನ್ನಸಂಗಮದೇವಾ.