Index   ವಚನ - 1606    Search  
 
ವಿಷದಷ್ಟವಾದ ನರನ, ಗಾರುಡಮಂತ್ರೌಷಧದಿಂದ ಆರೋಗ್ಯಕಾಯನ ಮಾಡುವಂತೆ, ಶೈವಗುರುವಿನ ಕೈಯಲ್ಲಿ ಮಂತ್ರೋಪದಿಷ್ಟನಾದ ಶಿಷ್ಯಂಗೆ, ವೀರಶೈವದ ಮಂತ್ರೋಪದೇಶದಿಂದ ಆತನ ಕಾಯಶುದ್ಧನ ಮಾಡಿ, ಆತನ ಲಿಂಗಕ್ಕೆ ಪ್ರಾಣಪ್ರತಿಷ್ಠೆಯ ತುಂಬಿ, ಆತನ ಅಂಗದ ಮೇಲೆ ಲಿಂಗವ ಬಿಜಯಂಗೈಸಿ, ಕೃತಕೃತ್ಯನಂ ಮಾಡಿದ ನಮ್ಮ ವೀರಶೈವಗುರು, ಕೂಡಲಚೆನ್ನಸಂಗಮದೇವ.