ಶಮೆ ದಮೆ ತಿತಿಕ್ಷೆ ಉಪರತಿ ಶ್ರದ್ಧೆ ಸಮಾಧಿ ಸಾಧನಸಂಪನ್ನನಾಗಿ
ಸದ್ಗುರುವನರಸುತ್ತ ಬಪ್ಪ ಶಿಷ್ಯನ ಸ್ಥೂಲತನುವಿನ ಕಂಗಳ
ಕೊನೆಯಲ್ಲಿ ಇಷ್ಟಲಿಂಗವ ಧರಿಸಿ;
ಸೂಕ್ಷ್ಮತನುವಿನ ಮನದ ಕೊನೆಯಲ್ಲಿ ಪ್ರಾಣಲಿಂಗವ ಧರಿಸಿ;
ಕಾರಣ ತನುವಿನ ಭಾವದ ಕೊನೆಯಲ್ಲಿ ತೃಪ್ತಿಲಿಂಗವ ಧರಿಸಿ,
'ಸರ್ವೇಂದ್ರಿಯಾಣಾಂ ನಯನಂ ಪ್ರಧಾನಮ್ʼ ಎಂಬ ಕಂಗಳ
ಇಷ್ಟಲಿಂಗಕ್ಕೆ ಸಮರ್ಪಿಸಿ,
'ಇಂದ್ರಿಯಾಣಾಂ ಮನೋನಾಥಃ' ಎಂಬ ಮನವನು
ಪ್ರಾಣಲಿಂಗಕ್ಕೆ ಸಮರ್ಪಿಸಿ;
ಪ್ರಾಣ ಭಾವವ ತೃಪ್ತಿಲಿಂಗಕ್ಕೆ ಸಮರ್ಪಿಸಿ,
'ಮನೋದೃಷ್ಟ್ಯಾ ಮರುನ್ನಾಶಾದ್ರಾಜಯೋಗಫಲಂ ಭವೇತ್'
ಎಂಬ ರಾಜಯೋಗ ಸಮರಸವಾದಲ್ಲಿ-
ಅಂಗ ಲಿಂಗ, ಲಿಂಗವಂಗವಾಗಿ
ಶಿಖಿ ಕರ್ಪೂರಯೋಗದಂತೆ ಪೂರ್ಣಾಪೂರ್ಣ
ದ್ವೈತಾದ್ವೈತ ಉಭಯ ವಿನಿರ್ಮುಕ್ತವಾಗಿ
'ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ'
ಎಂಬ ನಿಜದಲ್ಲಿ ನಿವಾಸಿಯಾದರು,
ಕೂಡಲಚೆನ್ನಸಂಗಾ ನಿಮ್ಮ ಶರಣರು.
Art
Manuscript
Music
Courtesy:
Transliteration
Śame dame titikṣe uparati śrad'dhe samādhi sādhanasampannanāgi
sadguruvanarasutta bappa śiṣyana sthūlatanuvina kaṅgaḷa
koneyalli iṣṭaliṅgava dharisi;
sūkṣmatanuvina manada koneyalli prāṇaliṅgava dharisi;
kāraṇa tanuvina bhāvada koneyalli tr̥ptiliṅgava dharisi,
'sarvēndriyāṇāṁ nayanaṁ pradhānamʼ emba kaṅgaḷa
iṣṭaliṅgakke samarpisi,
'indriyāṇāṁ manōnāthaḥ' emba manavanu
prāṇaliṅgakke samarpisi;
prāṇa bhāvava tr̥ptiliṅgakke samarpisi,
'manōdr̥ṣṭyā marunnāśādrājayōgaphalaṁ bhavēt'
emba rājayōga samarasavādalli-
Aṅga liṅga, liṅgavaṅgavāgi
śikhi karpūrayōgadante pūrṇāpūrṇa
dvaitādvaita ubhaya vinirmuktavāgi
'yatō vācō nivartantē aprāpya manasā saha'
emba nijadalli nivāsiyādaru,
kūḍalacennasaṅgā nim'ma śaraṇaru.