Index   ವಚನ - 1625    Search  
 
ಶರಣ ದೃಷ್ಟಾದೃಷ್ಟ ಕಾಣಯ್ಯಾ; ಮುಟ್ಟದೆ ಮುಟ್ಟುವ ಕಾಣಯ್ಯಾ, ಆಗಿನ ಆಗು ಕಾಣಯ್ಯಾ; [ಚೇಗಿನ ಚೇಗು] ಕಾಣಯ್ಯಾ; ಅರಿವಿನ ಅರಿವು ಕಾಣಯ್ಯಾ. ಲಿಂಗದಲ್ಲಿ ಹಿಂಗದ ಬಿಂದು ಕೂಡಲಚೆನ್ನಸಂಗಾ ನಿಮ್ಮಲ್ಲಿ ಸಂಗನಬಸವಣ್ಣ ಕಾಣಾ.