Index   ವಚನ - 1712    Search  
 
ಸಾಲೋಕ್ಯ ಸಾಮೀಪ್ಯ ಸಾರೂಪ್ಯ ಸಾಯುಜ್ಯದವರೆಲ್ಲರು ಬಸವಣ್ಣನಂತಹರೆ? ಇನ್ನು ಭೂಲೋಕದವರೆಲ್ಲರು ಬಸವಣ್ಣನಂತಹರೆ? ದುರಿತನಿವಾರಣ ಕೂಡಲಚೆನ್ನಸಂಗಾ ನಿಮ್ಮ ಶರಣ ಬಸವಣ್ಣನಿಂತಹ ಮಾಹಾಮಹಿಮ ನೋಡಯ್ಯಾ.