ನರದೇಹಿನಾಂ ನಾಸ್ತಿ ಲಿಂಗಂ'
ಅವನು ಅಶುದ್ಧ ದೇಹಿ ಸೂತಕದೇಹಿ,
'ಲಿಂಗಶುದ್ಧ ಜ್ಯೋತಿಸ್ತಥಾ ಶುದ್ಧ ಸಂಶುದ್ಧ ಲಿಂಗಾಂಗೀ'
ಲಿಂಗಪ್ರಾಣಿ ಪ್ರಸಾದದೇಹಿಯಾದ ಶರಣನು
ಮುಟ್ಟಿದುದೆಲ್ಲ ಪವಿತ್ರ.
ಆತನು ನುಡಿದುದೆಲ್ಲ ಶಿವಮಂತ್ರ.
ಆತ ನಿಂತ ಭುವನಂಗಳೆಲ್ಲ ಕೈಲಾಸ.
ಆತ ಸೋಂಕಿದ ಶಿಲೆಗಳೆಲ್ಲ ಪರಂಜ್ಯೋತಿಲಿಂಗಗಳಾದವು.
ಆತ ಸಂಚಾರ ಮಾಡಿದ ಜಲಗಳೆಲ್ಲ ಪುಣ್ಯತೀರ್ಥಂಗಳಾದವು.
ಆತನ ಪೂಜಿಸಿ ಪಾದೋದಕ ಪ್ರಸಾದವ ಪಡಕೊಂಡ ಭಕ್ತರೆಲ್ಲ
ರುದ್ರಗಣ ಅಮರಗಣಂಗಳಾದರು.
ಇಂತು ಶಿವಲಿಂಗಸಂಬಂಧಿಯಾದ ಈ ಜಂಗಮಕ್ಕೆ
ನಮೋ ನಮೋ ಎನುತಿದ್ದನಯ್ಯ, ನಿಮ್ಮ ಶರಣ
ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.