Index   ವಚನ - 39    Search  
 
ಶ್ರೀ ಗುರುಲಿಂಗಜಂಗಮದ ಚರಣೋದಕವ ಭೇದಿಸಲರಿಯದೆ, ಬರಿದೆ ಶಿವಭಕ್ತರೆಂದು ಹೊಗಳಿ ಮಡು ಹೊಂಡ ಹಳ್ಳ ಹೊಳೆ ಕೆರೆ ಬಾವಿ ಮೊದಲಾದ ಜಡ ಜಲವ ಕುಡಿದು, ಶಿವಭಕ್ತಿಯ ಬೊಗಳುವ ಮಲದೇಹಿಗಳ ಮುಖವ ನೊಡಲಾಗದು. ಪಾದೋದಕದ ನೆಲೆಕಲೆಯನರಿಯದ ಗೂಗೆಗಳ ಮುಖವ ನೋಡಲಾಗದೆಂದಾತ ನಿಮ್ಮ ಶರಣ, ಚೆನ್ನಯ್ಯಪ್ರಿಯ ನಿರ್ಮಾಯಪ್ರಭು ನಿಷ್ಕಳಲಿಂಗವು.