Index   ವಚನ - 16    Search  
 
ದೇಶದ ಮುಂದೆ ನಿರ್ದೇಶನವ ಕಂಡೆನಯ್ಯ. ಆ ನಿರ್ದೇಶನವ ಮುಂದೆ ಒಬ್ಬ ಮರುಳ ನಿಂದು, ಸತ್ತುಚಿತ್ತಾನಂದನಿತ್ಯಪರಿಪೂರ್ಣವೆಂಬ ಐದಂಗವನಂಗೀಕರಿಸಿಕೊಂಡು, ಪರಿಪೂರ್ಣವೆಂಬ ಆಶ್ರಮಕ್ಕೆ ಹೋಗಿ, ತಾನು ತಾನಾಗಿಪ್ಪನು ನೋಡಾ ಝೇಂಕಾರ ನಿಜಲಿಂಗಪ್ರಭುವೆ.