ಪರಮಾನಂದದ ಪ್ರಭೆಯಲ್ಲಿ
ನಿರ್ಮಲವಾದ ಶರಣನ ಸಂಗದಿಂದ
ಅವಿರಳಸ್ವಾನುಭವಸಿದ್ಧಾಂತವನರಿತು,
ಪರಕೆಪರವಾದ ಲಿಂಗವನಾಚರಿಸಿ,
ನಿಶ್ಚಿಂತ ನಿರಾಕುಳ ನಿರ್ಭರಿತನಾಗಿರ್ದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Paramānandada prabheyalli
nirmalavāda śaraṇana saṅgadinda
aviraḷasvānubhavasid'dhāntavanaritu,
parakeparavāda liṅgavanācarisi,
niścinta nirākuḷa nirbharitanāgirda nōḍā
jhēṅkāra nijaliṅgaprabhuve.