ಆಕಾಶದ ಮೇಲೆ ಏಕಾಂತ ಸೂಳೆಯ ಕಂಡೆನಯ್ಯ
ಆ ಸೂಳೆಯ ಗೃಹದಲ್ಲಿ ಸಾಸಿರದಳ
ಕಮಲಮಂಟಪವ ಕಂಡೆನಯ್ಯ.
ಆದಿಯಲ್ಲಿ ಒಬ್ಬ ವಿಟನು, ಮೂವರು ಗೆಳೆಯರ ಕೂಡಿಕೊಂಡು,
ಹೃದಯದಲ್ಲಿರ್ದ ರತ್ನವ ತೆಗೆದು,ಆ ಸೂಳೆಗೆ ಒತ್ತೆಯಂ ಕೊಟ್ಟು,
ಸಂಗಸಂಯೋಗಮಂ ಮಾಡುವುದ ಮೂವರು ಗೆಳೆಯರು ಕಂಡು
ನಿರ್ವಯಲಾದುದ ಕಂಡೆನಯ್ಯ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Ākāśada mēle ēkānta sūḷeya kaṇḍenayya
ā sūḷeya gr̥hadalli sāsiradaḷa
kamalamaṇṭapava kaṇḍenayya.
Ādiyalli obba viṭanu, mūvaru geḷeyara kūḍikoṇḍu,
hr̥dayadallirda ratnava tegedu,ā sūḷege otteyaṁ koṭṭu,
saṅgasanyōgamaṁ māḍuvuda mūvaru geḷeyaru kaṇḍu
nirvayalāduda kaṇḍenayya
jhēṅkāra nijaliṅgaprabhuve.