Index   ವಚನ - 82    Search  
 
ಕಾಯವಿಲ್ಲದ ಹಂಸನು ಗೂಡನಿಕ್ಕುವದ ಕಂಡೆನಯ್ಯ. ಅದು ಹೇಗೆಂದಡೆ: ಅದಕ್ಕೆ ಬುಡ ಒಂದು, ಕೊನೆ ಮೂರು, ಆರು ಕಡ್ಡಿಯ ಹೂಡಿ, ನಾದಬ್ರಹ್ಮವೆಂಬ ಕಟ್ಟ ಕಟ್ಟಿ, ಒಂಬತ್ತು ಯಜ್ಞದ ಗೂಡಿನೊಳಗೆ ಇಪ್ಪ ಹಂಸನ ಒಬ್ಬ ಸತಿಯಳು ಕಂಡು ಬೇಂಟೆಗಾರಂಗೆ ಹೇಳಲೊಡನೆ, ಆ ಬೇಂಟೆಕಾರ ಗದೆಯ ತಕ್ಕೊಂಡು ಇಡಲೊಡನೆ, ಸ್ವರ್ಗ ಮರ್ತ್ಯ ಪಾತಾಳವನೊಡೆದು ಆಕಾಶ ನಿರಾಕಾಶವೆಂಬ ನಿರ್ಬಯಲಲ್ಲಿ ಬಿತ್ತು ನೋಡಾ! ಆ ಬೇಂಟೆಕಾರ, ಆ ಗುರಿಯನೆತ್ತಲು ಆ ಕಾಯವಿಲ್ಲದ ಹಂಸ ಆ ಗದೆಯ ಕಚ್ಚಿತ್ತು ನೋಡಾ! ಇದೇನು ವಿಚಿತ್ರವೆಂದು ಬೆರಗಾಗುತಿರ್ದನಯ್ಯ ಝೇಂಕಾರ ನಿಜಲಿಂಗಪ್ರಭುವೆ ನಿಮ್ಮ ಶರಣನು.