ಒಬ್ಬ ಸಹಜಗಳ್ಳನು ನಿಟಿಲಮುಂದಳ
ಚಾವಡಿಯಲ್ಲಿ ನಿಂದು
ರಾಜಿಸುತಿಪ್ಪನು ನೋಡಾ!
ಆ ಕಳ್ಳನ ಹೆಜ್ಜೆಯ ಒಬ್ಬ ತಳವಾರ ಎತ್ತಿ ನೋಡಲು
ಹೆಜ್ಜೆ ಹೋದವು.
ಅಂಗಲಿಂಗಸಂಗಸಮರಸವೆಂಬ
ಲಿಂಗದ ಗುಡಿಯಲ್ಲಿ ಅಡಗಿಪ್ಪವಯ್ಯ.
ಆ ತಳವಾರನು ಹೆಜ್ಜೆಯನೆತ್ತಿ
ಆ ಕಳ್ಳನ ಹೆಜ್ಜೆಯ ಹಿಡಿದ ಭೇದವ
ನಿಮ್ಮ ಶರಣರೆ ಬಲ್ಲರಲ್ಲದೆ ಉಳಿದವರೆತ್ತ ಬಲ್ಲರಯ್ಯ
ಝೇಂಕಾರ ನಿಜಲಿಂಗಪ್ರಭುವೆ.