Index   ವಚನ - 86    Search  
 
ನೊಸಲಕಣ್ಣು, ಪಂಚಮುಖ, ದಶಭುಜ, ತನುವೇಕ, ದ್ವೀಪಾದ, ಸ್ಫುಟಿಕವರ್ಣ, ಈರೇಳುಭುವನ ಹದಿನಾಲ್ಕುಲೋಕಂಗಳ ಹೊತ್ತವನಯ್ಯ. ರವಿ ಶಶಿಯ ಬೆಳಗನೊಳಕೊಂಡು ಆಕಾಶ ನಿರಾಕಾಶವೆಂಬ ನಿರ್ವಯಲಲ್ಲಿ ನಿಂದು ತೊಳಗಿಬೆಳಗುತಿಪ್ಪನು ನೋಡಾ! ಆತಂಗೆ ಅತಳಾಧಾರವಿಲ್ಲ, ವಿತಳಾಧಾರವಿಲ್ಲ ಮಹಾಘನ ಅಗಮ್ಯ ಅಗೋಚರ ಅಪ್ರಮಾಣ ನಿರಾಕುಳ ನಿರಂಜನ ನಿರ್ಭರಿತ ನಿರವಯಲಿಂಗ ತಾನೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.