Index   ವಚನ - 105    Search  
 
ಒಬ್ಬಳ ಬಸಿರಲಿ ಶಿಶುವು ಹುಟ್ಟಿ, ಬ್ರಹ್ಮರಂಧ್ರವೆಂಬ ತೊಟ್ಟಿಲು ಕಟ್ಟಿ, ಆ ಶಿಶುವ ಮಲಗಿಸಿ, ಕ್ರಿಯಾಶಕ್ತಿ ಜ್ಞಾನಶಕ್ತಿ ಇಚ್ಫಾಶಕ್ತಿ ಆದಿಶಕ್ತಿ ಪರಾಶಕ್ತಿ ಚಿಚ್ಫಕ್ತಿ ಈ ಶಕ್ತಿಯರು ಆ ಶಿಶುವಿಂಗೆ ಜೋಗುಳವ ಪಾಡುತಿರ್ದರು ನೋಡಾ! ಆ ಶಿಶುವಿಂಗೆ ಹಡೆದ ತಾಯಿ ಬಂದು ಚಂದ್ರ ಸೂರ್ಯರೆಂಬ ದೀವಿಗೆಯಂ ಮುಟ್ಟಿಸಿ, ನವರತ್ನದ ಹರಿವಾಣದೊಳಗೆ ಪಂಚಾರ್ತಿಯ ಮೇಲೆ ಪಂಚದೀಪವನ್ನಿಕ್ಕಿ ಓಂ ನಮೋ ಓಂ ನಮೋ ಎಂದು ಬೆಳಗುತಿರ್ಪಳಯ್ಯ ಝೇಂಕಾರ ನಿಜಲಿಂಗಪ್ರಭುವೆ.