Index   ವಚನ - 161    Search  
 
ಪಂಚಮುಖದ ಮೇಲೆ ಮಿಂಚುವ ಶಿವಲಿಂಗವ ಕಂಡೆನಯ್ಯ. ಆ ಲಿಂಗದಂಚಿನ ಬೆಳಗಿನೊಳಗೆ ಸುಳಿದಾಡುವ ಸತಿಯಳು ತನ್ನ ಸುಳುವಿನ ಭೇದವ ತಾನೆ ನುಂಗಿ ನಿರ್ವಯಲಾದುದ ಕಂಡೆ ನೋಡಾ, ಝೇಂಕಾರ ನಿಜಲಿಂಗಪ್ರಭುವೆ.