ಅಹಂಕಾರವೆಂಬ ಕೊಂಬ ಮುರಿದು
ನಾನು ನೀನುಗಳೆಂಬ ಉಭಯಗಳನಳಿದು ನಿಂದು
ಸ್ವಾನುಭಾವಸಿದ್ಧಾಂತದೊಳು ಮೈಮರೆದು ಆಚರಿಸಬಲ್ಲಾತನೆ
ನಿಮ್ಮ ಸಂಬಂಧಿ ಕಾಣಾ ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Ahaṅkāravemba komba muridu
nānu nīnugaḷemba ubhayagaḷanaḷidu nindu
svānubhāvasid'dhāntadoḷu maimaredu ācarisaballātane
nim'ma sambandhi kāṇā jhēṅkāra nijaliṅgaprabhuve.