ನಾದ ಬಿಂದು ಕಲೆಗಳು ಇಲ್ಲದ ಮುನ್ನ,
ಅತ್ತತ್ತಲೆ ಓಂಕಾರನೆಂಬ ಗಣೇಶ್ವರನಿರ್ಪ ನೋಡಾ.
ಆ ಓಂಕಾರಗಣೇಶ್ವರಂಗೆ ಒಬ್ಬ ಸತಿಯಳು ಇರ್ಪಳು ನೋಡಾ.
ಆ ಸತಿಯಳ ಅಂಗದಲ್ಲಿ ಐವರು ಮಕ್ಕಳು ಇರ್ಪರು ನೋಡಾ.
ಐವರು ಮಕ್ಕಳು ಇಪ್ಪತ್ತೈದು ಕೇರಿಗಳಲ್ಲಿ
ಸುಳಿದಾಡುತಿರ್ಪರು ನೋಡಾ.
ಆ ಇಪ್ಪತ್ತೈದು ಕೇರಿಗಳ ಒಂದು ಇರುವೆ ನುಂಗಿತು ನೋಡಾ.
ಆ ಇರುವೆಯ ಒಬ್ಬ ಸತಿಯಳು ನುಂಗಿದಳು ನೋಡಾ.
ಆ ಸತಿಯಳ ಓಂಕಾರಗಣೇಶ್ವರನು ನುಂಗಿದನು ನೋಡಾ
ಝೇಂಕಾರ ನಿಜಲಿಂಗಪ್ರಭುವೆ.