Index   ವಚನ - 397    Search  
 
ಇಷ್ಟಲಿಂಗದ ಭೇದವನರಿಯದೆ ಪ್ರಾಣಲಿಂಗದ ಭೇದವ ಬಲ್ಲೆನೆಂಬ ಭ್ರಷ್ಟಾಚಾರಿಗಳು ನೀವು ಕೇಳಿರೋ. ಇಷ್ಟಲಿಂಗದ ಕಳಾಭೇದವನರಿತು, ಪ್ರಾಣಲಿಂಗಸಂಬಂಧಿಯಾಗಿ, ದೃಷ್ಟಲಿಂಗವ ಕಾಣಬಲ್ಲಾತನೆ ಅನಾದಿ ಶರಣ ನೋಡಾ ಝೇಂಕಾರ ನಿಜಲಿಂಗಪ್ರಭುವೆ.