Index   ವಚನ - 416    Search  
 
ಹಿಂದಳ ಮಾತ ಕೇಳಿ ಮುಂದೆ ನಿಂದ್ಯವನಾಡುವ ಹೊಲೆಯನ ಮಾತ ಹೇಳಲಾಗದು, ಕೇಳಲಾಗದು. ಮುಂದಲ ಮಾತ ಕೇಳಿ ನಿಂದ್ಯವನಾಡುವ ಮಾದಿಗನ ಮಾತ ಹೇಳಲಾಗದು, ಕೇಳಲಾಗದು. ಇಂತೀ ಇವರಿಬ್ಬರ ಮಾತು ಸತ್ತಶ್ವಾನನ ಹೊಲಸಿನಿಂದತ್ತತ್ತಲಾಯಿತ್ತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.