Index   ವಚನ - 530    Search  
 
ಸಂತೆಯ ಬೀದಿಯಲ್ಲಿ ಒಬ್ಬ ಸೂಳೆ ಕುಳಿತಿರುವುದ ಕಂಡೆನಯ್ಯ. ಆ ಸೂಳೆಗೆ ಐವರು ಮಕ್ಕಳು ಹುಟ್ಟಿ ಜಗವನೆಲ್ಲ ಏಡಿಸ್ಯಾಡುತಿಪ್ಪರು ನೋಡಾ. ಇದು ಕಾರಣ, ಮೇಲಣ ದಾರಿಯಿಂದ ಒಬ್ಬ ಪುರುಷ ಬಂದು ಆ ಐವರು ಮಕ್ಕಳ ಕೊಂದು ಆ ಸೂಳೆಯ ಹಿಡಿಯಲೊಡನೆ ಸಂತೆ ಹರಿದು ಬಯಲಾದ ಸೋಜಿಗನ ನೋಡಾ ಝೇಂಕಾರ ನಿಜಲಿಂಗಪ್ರಭುವೆ.