Index   ವಚನ - 676    Search  
 
ಕಪ್ಪೆಯ ನುಂಗಿದ ಕೋಗಿಲೆ ಸತ್ತು ಕೂಗುವುದ ಕಂಡೆನಯ್ಯ. ತಿಪ್ಪೆಯ ಸೋಸಿದ ಸರ್ಪ ಮಾಣಿಕ್ಯವ ನುಂಗಿದುದ ಕಂಡೆನಯ್ಯ. ಕಾಯ ಸತ್ತು, ಲಿಂಗವುಳಿದು, ಆ ಲಿಂಗದ ಭೇದವ ಬಲ್ಲ ಹಿರಿಯರ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.