Index   ವಚನ - 740    Search  
 
ಪೃಥ್ವಿ ಅಪ್ಪು ತೇಜ ವಾಯು ಆಕಾಶದಿಂದತ್ತತ್ತ ಮಹಾಲಿಂಗದ ಬೆಳಗು. ಆ ಬೆಳಗಿನೊಳಗೆ ನಾನು ನೀನೆಂಬುದ ಮರೆದು, ಅವಿರಳ ಸ್ವಾನುಭಾವಸಿದ್ಧಾಂತವನರಿತು, ತಾನು ತಾನಾಗಿಪ್ಪನು ನೋಡಾ ಝೇಂಕಾರ ನಿಜಲಿಂಗಪ್ರಭುವೆ.