Index   ವಚನ - 770    Search  
 
ಆಜ್ಞೇಯಚಕ್ರದಲ್ಲಿ ಮಹಾಗೋಚರಲಿಂಗವ ಕಂಡೆನಯ್ಯ. ಆ ಲಿಂಗದೊಳಗೆ ಅನಂತಕೋಟಿ ಕಿರಣಂಗಳು ಅಡಗಿಪ್ಪವು ನೋಡಾ. ಆಲಿಂಗವ ನೋಡ ನಿರವಯವಾಯಿತ್ತು ನೋಡಾ, ಝೇಂಕಾರ ನಿಜಲಿಂಗಪ್ರಭುವೆ.