Index   ವಚನ - 14    Search  
 
ಬ್ರಹ್ಮನ ಸಂತತಿ ಭಕ್ತಿಸ್ಥಲಕ್ಕೆ ಸಂದಿತ್ತು. ವಿಷ್ಣುವಿನ ಸಂತತಿ ಮಾಹೇಶ್ವರಸ್ಥಲಕ್ಕೆ ಸಂದಿತ್ತು. ರುದ್ರನ ಸಂತತಿ ಪ್ರಸಾದಿಸ್ಥಲಕ್ಕೆ ಸಂದಿತ್ತು. [ಈಶ್ವರನ ಸಂತತಿ ಪ್ರಾಣಲಿಂಗಿಸ್ಥಲಕ್ಕೆ ಸಂದಿತ್ತು]. ಸದಾಶಿವನ ಸಂತತಿ ಶರಣಸ್ಥಲಕ್ಕೆ ಸಂದಿತ್ತು. ಪರಶಿವನ ಸಂತತಿ ಐಕ್ಯಸ್ಥಲಕ್ಕೆ ಸಂದಿತ್ತು. ಅಷ್ಟು ಎಲ್ಲ ಕೂಡಿ ಇಷ್ಟಲಿಂಗವಾಗಿ ನಿಂದಡೆ. ಅದು ನೀನು ನಾನು ಉಭಯವಿಲ್ಲದಂತೆ ಆಯಿತ್ತು ಕಾಣಾ, ಜಂಗಮಲಿಂಗಪ್ರಭುವೆ.