Index   ವಚನ - 4    Search  
 
ಮುನ್ನ ಪರಸತಿ ಪಾರ್ವತಿಯೆಂದು ನಡೆಸಿತ್ತು ನುಡಿಸಿತ್ತು ಗುರುವಚನ. ಬಳಿಕ ಎನ್ನ ಶರಣಸತಿಯೆಂದು ನಡೆಸಿತ್ತು ನುಡಿಸಿತ್ತು ಗುರುವಚನ. ಇನ್ನು ಸತಿಯರೆಲ್ಲಾ ಗುರುಸತಿಯರೆಂದು ನಡೆಸಿತ್ತು ನುಡಿಸಿತ್ತು ಗುರುವಚನ. ಅಚ್ಚಿಗವಿಲ್ಲದೆ ಮಚ್ಚಿದ ಮನವನು ನಿಶ್ಚಿಂತ ಮಾಡಿತ್ತು ಗುರುವಚನ. ಶಂಭು ಸೋಮನಾಥಲಿಂಗ ಸಂಗ ಸುಸಂಗವ ಮಾಡಿತ್ತು ಗುರುವಚನ.