ತರುವಾಗಿ ಹುಟ್ಟಿ ವಾಯುವಿಗೆ ಎಡೆಗೊಡದಿರಬಹುದೆ?
ತನುವೆಂಬುದ ಹೊತ್ತು ಲಿಂಗವ ಪೂಜಿಸದಿರಬಹುದೆ?
ಅಂಗವಿಲ್ಲದ ಸಂಗವಂಟೆ? ಸಂಗವಿಲ್ಲದ ಸುಖವುಂಟೆ?
ಸುಖವಿಲ್ಲದ ಕಳೆ ರಸವುಂಟೆ?
ಇಂತೀ ಅಂಗದಲ್ಲಿದ್ದಂತೆ ಲಿಂಗವನರಿದು,
ಲಿಂಗದಲ್ಲಿದಂತೆ ಸಕಲ ಪ್ರಪಂಚಿಕವ ಮುರಿದು ನಿಂದಲ್ಲಿ
ಕಾಲಾಂತಕ ಭೀಮೇಶ್ವರಲಿಂಗವು ತಾನೆ.
Art
Manuscript
Music
Courtesy:
Transliteration
Taruvāgi huṭṭi vāyuvige eḍegoḍadirabahude?
Tanuvembuda hottu liṅgava pūjisadirabahude?
Aṅgavillada saṅgavaṇṭe? Saṅgavillada sukhavuṇṭe?
Sukhavillada kaḷe rasavuṇṭe?
Intī aṅgadalliddante liṅgavanaridu,
liṅgadallidante sakala prapan̄cikava muridu nindalli
kālāntaka bhīmēśvaraliṅgavu tāne.