Index   ವಚನ - 50    Search  
 
ಪಾಪ ಪುಣ್ಯವಿಲ್ಲಾ ಎಂದು ನೀಕರಿಸಿ ನಡೆಯಬಹುದೆ ದಿವರಾತ್ರೆ ಉಳ್ಳನ್ನಕ್ಕ? ಉತ್ತಮ ಕನಿಷ್ಠ ಮಧ್ಯಮವೆಂಬುದನರಿವನ್ನಕ್ಕ ಕಾಲ ವೇಳೆಯನರಿದು ಶಿವಲಿಂಗಾರ್ಚನೆಯ ಮಾಡಬೇಕು. ವಾರ ನೇಮ ಸ್ಥಿತಿ ಲಗ್ನಂಗಳಲ್ಲಿ ಹರಶರಣರಿಂದ ಪರಿಹರಿಸಿಕೊಳ್ಳಬೇಕು. ಅದೆಂತೆಂದಡೆ: ತನ್ನ ಒಡಲೆಂಬನ್ನಕ್ಕ, ತನ್ನ ಗುರುವೆಂಬನ್ನಕ್ಕ, ತನ್ನ ಜಂಗಮವೆಂಬನ್ನಕ್ಕ, ಶೀತ ಉಷ್ಣ ಮೃದು ಕಠಿಣಂಗಳನರಿವನ್ನಕ್ಕ, ಕಾಲಾಂತಕ ಭೀಮೇಶ್ವರಲಿಂಗವೆಂದು ಪೂಜಿಸಬೇಕು.