ಲಿಂಗಕ್ಕೆ ಮಲಿನವಾದಲ್ಲಿ ಒರಸಿ
ತೊಳೆದಡೆ ದೋಷವ ಕಟ್ಟಬಹುದೆ?
ಗುರು ಚರ ಭಕ್ತರಲ್ಲಿ ಭ್ರಾಮಕದಿಂದ ಮರೆದಿರೆ
ಅರುಪಲಿಕ್ಕೆ ದೂಷಣೆ ಉಂಟೆ?
ತನ್ನಂಗದ ಕಲೆವ ತಾ ಹಿಂಗಿಸುವುದಕ್ಕೆ ನಿಂದೆ ಗುಣದೋಷಂಗಳುಂಟೆ?
ಇದು ಕಾರಣದಲ್ಲಿ ಒಡೆಯನ
ಹರವರಿ ಬಂಟಂಗೆ ಲಾಭವಹಂತೆ,
ಉಭಯಕ್ಕೆ ಕೇಡಿಲ್ಲದಿರ್ಪ ಭಕ್ತಿಸತ್ಯ.
ಕಾಲಾಂತಕ ಭೀಮೇಶ್ವರಲಿಂಗನು
ಉಭಯದ ತಪ್ಪನೊಪ್ಪನಾಗಿ.
Art
Manuscript
Music
Courtesy:
Transliteration
Liṅgakke malinavādalli orasi
toḷedaḍe dōṣava kaṭṭabahude?
Guru cara bhaktaralli bhrāmakadinda maredire
arupalikke dūṣaṇe uṇṭe?
Tannaṅgada kaleva tā hiṅgisuvudakke ninde guṇadōṣaṅgaḷuṇṭe?
Idu kāraṇadalli oḍeyana
haravari baṇṭaṅge lābhavahante,
ubhayakke kēḍilladirpa bhaktisatya.
Kālāntaka bhīmēśvaraliṅganu
ubhayada tappanoppanāgi.