Index   ವಚನ - 83    Search  
 
ಸಂಜೀವನದ ನೆಳಲಲ್ಲಿ ನಿಲಲಾಗಿ ಅಂಗದ ಆಪ್ಯಾಯನವರತಂತೆ ಸಿದ್ಧರಸದಲ್ಲಿ ಪ್ರಸಿದ್ಧರಸ ಕೂಡೆ ಅದ ಹೊದ್ದಿಹ ಗುಣವೆಲ್ಲವು ಹೇಮವಾದಂತೆ ಮಾಡುವ ಮಾಟ ನಿಜವಾಗಿ, ಪೂಜಿಸುವ ದೃಷ್ಟವಾಗಿ, ಸಂಗಂಧದ ಮಂದಿರದಲ್ಲಿ ಸಂಧಿಸಿದಂತೆ ಉಭಯ ಭಾವಕ್ಕೆ ಮಾಟಕೂಟಕ್ಕೆ ಚಿತ್ತಕ್ಕೆ ಭಿನ್ನವಿಲ್ಲದೆ ನಿಂದುದು ಕಾಲಾಂತಕ ಭೀಮೇಶ್ವರಲಿಂಗವ ಸಲೆ ಸಂದಿಲ್ಲದೆ ಅರಿದುದು.