Index   ವಚನ - 235    Search  
 
ಇನ್ನು ಅಖಂಡಮಹಾಜ್ಯೋತಿಪ್ರಣವದ ಜ್ಯೋತಿಸ್ವರೂಪದಲ್ಲಿ ಮಕಾರ ಉತ್ಪತ್ಯ. ಆ ಪ್ರಣವದ ಕುಂಡಲಾಕಾರದಲ್ಲಿ ಅಕಾರ ಉತ್ಪತ್ಯ. ಆ ಪ್ರಣವದ ತಾರಕಾಸ್ವರೂಪದಲ್ಲಿ ಉಕಾರ ಉತ್ಪತ್ಯವಾಯಿತ್ತು ನೋಡಾ. ಇದಕ್ಕೆ ಚಕ್ರಾತೀತಾಗಮೇ: ಶ್ರೀ ಮಹಾದೇವ ಉವಾಚ- ಓಂಕಾರಂ ಜ್ಯೋತಿರೂಪಂ ಚ ಮಕಾರಂ ಚ ಪ್ರಜಾಯತೇ | ಓಂಕಾರಂ ಕುಂಡಲಾಕಾರಂ ಅಕಾರಂ ಚ ಪ್ರಜಾಯತೇ || ಓಂಕಾರಂ ತಾರಕಾರೂಪೇ ಉಕಾರಂ ಚ ಪ್ರಜಾಯತೇ | ಇತ್ಯಕ್ಷರತ್ರಯಂ ದೇವಿ ಸ್ಥಾನಸ್ಥಾನೇಷು ಜಾಯತೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.