ಇನ್ನು ವಿಭೂತಿಸ್ಥಲವದೆಂತೆಂದಡೆ:
ಶ್ರೀ ವಿಭೂತಿಯು ಮೊದಲಲ್ಲಿ ಗೂಢನಿರ್ನಾಮವಾಗಿದ್ದಿತ್ತು.
ಎರಡನೆಯಲ್ಲಿ ಜ್ಞಾನಸ್ವರೂಪವಾಗಿದ್ದುದು,
ಮೂರನೆಯಲ್ಲಿ ಜ್ಞಾನವಹನವಾಗಿದ್ದುದು.
ನಾಲ್ಕನೆಯಲ್ಲಿ ಭಸ್ಮವಾಗಿ ಧರಿಸಿದರು ಶ್ರೀ ವಿಭೂತಿಯ.
ಇದಕ್ಕೆ ಈಶ್ವರ ಉವಾಚ:
ಪ್ರಥಮಂ ಗೂಢನಿರ್ನಾಮಂ ದ್ವಿತೀಯಂ ಚಿತ್ಸ್ವರೂಪಕಂ |
ತೃತೀಯಂ ಚಿದ್ವಿಲಾಸಂ ಚ ಚತುರ್ಥಂ ಭಸ್ಮಧಾರಣಂ ||
ಅನಾದಿ ಶಾಶ್ವತಂ ನಿತ್ಯಂ ಚೈತನ್ಯಂ ಚಿತ್ಸ್ವರೂಪಕಂ |
ಚಿದಂಗಂ ವೃಷಭಾಕಾರಂ ಚಿದ್ಭಸ್ಮಂ ಲಿಂಗಧಾರಣಂ ||''
ಇಂತೆಂದುದಾಗಿ, ಈ ಮಹಾಭಸ್ಮಕ್ಕೆ ನಮಸ್ಕಾರ ನೋಡಾ.
ಭಸ್ಮ ಜ್ಯೋತಿಸ್ವರೂಪಾಯ ಶಿವಾಯ ಪರಮಾತ್ಮನೇ |
ಷಟ್ತ್ರಿಂಶತತ್ವಬೀಜಾಯ ನಮಃ ಶಾಂತಾಯ ತೇಜಸೇ ||''
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Innu vibhūtisthalavadentendaḍe:
Śrī vibhūtiyu modalalli gūḍhanirnāmavāgiddittu.
Eraḍaneyalli jñānasvarūpavāgiddudu,
mūraneyalli jñānavahanavāgiddudu.
Nālkaneyalli bhasmavāgi dharisidaru śrī vibhūtiya.
Idakke īśvara uvāca:
Prathamaṁ gūḍhanirnāmaṁ dvitīyaṁ citsvarūpakaṁ |
tr̥tīyaṁ cidvilāsaṁ ca caturthaṁ bhasmadhāraṇaṁ ||
anādi śāśvataṁ nityaṁ caitan'yaṁ citsvarūpakaṁ |
cidaṅgaṁ vr̥ṣabhākāraṁ cidbhasmaṁ liṅgadhāraṇaṁ ||''
Intendudāgi, ī mahābhasmakke namaskāra nōḍā.
Bhasma jyōtisvarūpāya śivāya paramātmanē |
ṣaṭtrinśatatvabījāya namaḥ śāntāya tējasē ||''
intendudāgi,
apramāṇakūḍalasaṅgamadēvā.