ಸರ್ವಾತ್ಮತತ್ವದಲ್ಲಿ-
'ಏಕಾಕ್ಷರೋ ಭವತಿ | ಓಂ ಸರ್ವಾತ್ಮಾ ದೇವತಾ |'
ಎಂದುದು ಶ್ರುತಿ.
ಆ ಸರ್ವಾತ್ಮತತ್ವದಲ್ಲಿ ಏಕಾಕ್ಷರ ಉತ್ಪತ್ಯವಾಗಿ,
ಪಶ್ಚಿಮಚಕ್ರದ ಏಕಾಕ್ಷರದಳಪದ್ಮದಲ್ಲಿ
ನ್ಯಾಸವಾಗಿಹುದು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Sarvātmatatvadalli-
'ēkākṣarō bhavati | ōṁ sarvātmā dēvatā |'
endudu śruti.
Ā sarvātmatatvadalli ēkākṣara utpatyavāgi,
paścimacakrada ēkākṣaradaḷapadmadalli
n'yāsavāgihudu nōḍā
apramāṇakūḍalasaṅgamadēvā.