ತತ್ವಾತ್ಮತತ್ವದಲ್ಲಿ-
'ಚೌಷಷ್ಠಿದಳಾಕ್ಷರೋ ಭವತಿ | ಓಂ ತತ್ವಾತ್ಮಾ ದೇವತಾ |'
ಎಂದುದು ಶ್ರುತಿ.
ಆ ತತ್ವಾತ್ಮತತ್ವದಲ್ಲಿ ಚೌಷಷ್ಠಿ ಅಕ್ಷರಂಗಳುತ್ಪತ್ಯವಾಗಿ
ನಿಶಾದಚಕ್ರದ ಚೌಷಷ್ಠಿದಳಪದ್ಮದಲ್ಲಿ
ನ್ಯಾಸವಾಗಿಹುದು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Tatvātmatatvadalli-
'cauṣaṣṭhidaḷākṣarō bhavati | ōṁ tatvātmā dēvatā |'
endudu śruti.
Ā tatvātmatatvadalli cauṣaṣṭhi akṣaraṅgaḷutpatyavāgi
niśādacakrada cauṣaṣṭhidaḷapadmadalli
n'yāsavāgihudu nōḍā
apramāṇakūḍalasaṅgamadēvā