Index   ವಚನ - 475    Search  
 
ಆ ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರಪ್ರಣವದ ಜ್ಯೋತಿಸ್ವರೂಪದಲ್ಲಿ ಭಾವಹಸ್ತ ಹುಟ್ಟಿತ್ತು. ಆ ಪ್ರಣವದ ದರ್ಪಣಾಕಾರದಲ್ಲಿ ಸುಜ್ಞಾನಹಸ್ತ ಹುಟ್ಟಿತ್ತು. ಆ ಪ್ರಣವದ ಅರ್ಧಚಂದ್ರಕದಲ್ಲಿ ಸುಮನಹಸ್ತ ಹುಟ್ಟಿತ್ತು. ಆ ಪ್ರಣವದ ಕುಂಡಲಾಕಾರದಲ್ಲಿ ನಿರಹಂಕಾರಹಸ್ತ ಹುಟ್ಟಿತ್ತು. ಆ ಪ್ರಣವದ ದಂಡಕಸ್ವರೂಪದಲ್ಲಿ ಸುಬುದ್ಧಿಹಸ್ತ ಹುಟ್ಟಿತ್ತು. ಆ ಪ್ರಣವದ ತಾರಕಸ್ವರೂಪದಲ್ಲಿ ಸುಚಿತ್ತಹಸ್ತ ಹುಟ್ಟಿತ್ತು ನೋಡಾ. ಇದಕ್ಕೆ ಅತಿಮಹಾಗಮಸಾರೇ: ಓಂಕಾರ ಜ್ಯೋತಿಸ್ವರೂಪೇ ಚ ಭಾವಹಸ್ತಂ ಚ ಜಾಯತೇ | ಓಂಕಾರದರ್ಪಣಾಕಾರೇ ಜ್ಞಾನಹಸ್ತಂ ಚ ಜಾಯತೇ || ಓಂಕಾರಚಾರ್ಧಚಂದ್ರೇ ಚ ಮನೋಹಸ್ತಸ್ಯ ಜಾಯತೇ | ಓಂಕಾರಕುಂಡಲಾಕಾರೇ ನಿರಹಂಕಾರಂ ಚ ಜಾಯತೇ || ಓಂಕಾರದಂಡಕಸ್ವರೂಪೇ ಚ ಬುದ್ಧಿಹಸ್ತಂ ಚ ಜಾಯತೇ | ಓಂಕಾರತಾರಕರೂಪೇ ಚಿತ್ತಹಸ್ತಂ ಚ ಜಾಯತೇ | ಇತಿ ಹಸ್ತಶ್ಚ ಷಡ್ದೇವಿ ಸ್ಥಾನಸ್ಥಾನೇಷು ಜಾಯತೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.