Index   ವಚನ - 572    Search  
 
ಆ ಹೃದಯಾಕಾಶದಲ್ಲಿ ಮಹಾಲಿಂಗ ಸ್ವಾಯತವಾಗಿಹುದು. ವಾಗೀಂದ್ರಿಯಂಗದಲ್ಲಿ ಪ್ರಸಾದಲಿಂಗ ಸ್ವಾಯತವಾಗಿಹುದು. ಹಸ್ತೇಂದ್ರಿಯಂಗದಲ್ಲಿ ಚರಲಿಂಗ ಸ್ವಾಯತವಾಗಿಹುದು. ಪಾದೇಂದ್ರಿಯಂಗದಲ್ಲಿ ಶಿವಲಿಂಗ ಸ್ವಾಯತವಾಗಿಹುದು. ಗುಹ್ಯೇಂದ್ರಿಯಂಗದಲ್ಲಿ ಗುರುಲಿಂಗ ಸ್ವಾಯತವಾಗಿಹುದು. ಗುದೇಂದ್ರಿಯಂಗದಲ್ಲಿ ಆಚಾರಲಿಂಗ ಸ್ವಾಯತವಾಗಿಹುದು ನೋಡಾ. ಇದಕ್ಕೆ ಈಶ್ವರೋsವಾಚ: ಹೃದಯಾಂಗೇ ಮಹಾಲಿಂಗಂ ವಾಗಂಗೇತು ಪ್ರಸಾದಕಂ | ಹಸ್ತಾಂಗೇ ಚರಲಿಂಗಂ ಚ ಪಾದಾಂಗೇ ಶಿವಲಿಂಗಕಂ || ಗುಹ್ಯಾಂಗೇ ಗುರುಲಿಂಗಂತು ಗುದೇ ಆಚಾರಲಿಂಗಕಂ | ಇತಿ ಲಿಂಗಸ್ಥಲಂ ಜ್ಞಾನಂ ದುರ್ಲಭಂ ಕಮಲಾನನೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.