ಇನ್ನು ಮೇಲಾದವಸ್ಥೆಯ ದರ್ಶನವದೆಂತೆಂದಡೆ:
ಶುದ್ಧ ತತ್ವಕೈದು ಇಂಬಾಗಿ ನಿಂದು
ಅತೀತ ಮೊದಲಾಗಿ ದರ್ಶನವ ಮಾಡುವುದು.
ಅದೆಂತೆಂದಡೆ:
ನಾ ಇಂಬಾಗಿ ನಿಂದು ಒಂದೆಂಬುದ ಕೆಟ್ಟರವನು
ಪುರುಷನನು ಮೂಲಾಧಾರದಲ್ಲಿ ದರ್ಶನವ ಮಾಡುವುದು
ತೂರ್ಯಾತೀತ ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Innu mēlādavastheya darśanavadentendaḍe:
Śud'dha tatvakaidu imbāgi nindu
atīta modalāgi darśanava māḍuvudu.
Adentendaḍe:
Nā imbāgi nindu ondembuda keṭṭaravanu
puruṣananu mūlādhāradalli darśanava māḍuvudu
tūryātīta nōḍā
apramāṇakūḍalasaṅgamadēvā.