ಅಲ್ಲಿಂದ ಮೇಲೆ ಅನಾಹತಚಕ್ರದ
ದ್ವಾದಶದಳಪದ್ಮ ಮಧ್ಯದಲ್ಲಿಹ ಮಂತ್ರ ತತ್ಪುರುಷಮಂತ್ರ.
ಅಲ್ಲಿಹ ಪದ- ವ್ಯಾಪಿನ್ ರೂಪಿನ್ ಅರೂಪಿನ್ ಪ್ರಥಮ
ಪ್ರಥಮ ತೇಜಸ್ತೇಜ ಜ್ಯೋತಿರ್ಜ್ಯೋತಿ ಅರೂಪ
ಅನಿಲಿನ ಅಧೂಮ'' ವೆಂಬ ಹನ್ನೆರಡು ಪದ.
ಇಲ್ಲಿಹ ವರ್ಣ-ಕ ಖ ಗ ಘ ಙ ಚ ಛ ಜ ಝ ಞ ಟ ಠ
ಎಂಬ ಹನ್ನೆರಡು ವರ್ಣ.
ಅಲ್ಲಿಹ ಭುವನ-ಸ್ಥಲೇಶ್ವರ, ಸ್ಥೂಲೇಶ್ವರ, ಶಂಖಕರ್ಣ, ಕಾಳಾಂಜನ,
ಮಂಡಲೇಶ್ವರ, ಮಾಕೂಟ, ದ್ವಿರಂಡ, ಛಗ, ಚಂದ, ಸ್ಥಾಣು, ಸ್ವರ್ಣಾಕ್ಷ.
ಭದ್ರಕರ್ಣ, ಮಹಾಲಯ, ಅವಿಮುಕ್ತ, ರುದ್ರಕೋಟಿ,
ವಸ್ತ್ರಾಪದ, ಭೀಮೇಶ್ವರ,
ಮಹೀಂದ್ರ, ಅಷ್ಟಹಾಸ, ವಿಮಲೇಶ್ವರ, ನಖಲ, ನಾಖಲ,
ಕರುಕ್ಷೇತ್ರ, ಭೈರವ, ಕೈದಾರ, ಮಹಾಬಲ,
ಮಧ್ಯಮೇಶ್ವರ, ಮಾಹೇಂದ್ರಕೇಶ್ವರ, ಜಲಭೇಶ್ವರ,
ಶ್ರೀಶೈಲ, ಹರಿಶ್ಚಂದ್ರ, ಅಕುಲಿಶ, ಮುಂಡಿ, ಚಾರುಭೂತಿ,
ಆಷಾಡಿ, ಪೌಷ್ಕರ, ನೈಮಿಷ, ಪ್ರಭಾಸ, ಅಮರೇಶ್ವರ,
ಭದ್ರಕಾಳ, ವೀರಭದ್ರ, ತ್ರಿಲೋಚನ, ವಿಪ್ಸು, ವಭ,
ವಿವಾಮಿ, ತ್ರಿದಶೇಶ್ವರ, ತ್ರಿಯಕ್ಷ, ಗಣಾ
ಎಂಬ ನಾಲ್ವತ್ತೆಂಟು ಭುವನ.
ಅಲ್ಲಿಹ ತತ್ತ್ವ-ಶ್ರೋತ್ರ, ತ್ವಕ್ಕು, ಚಕ್ಷು, ಜಿಹ್ವೆ,
ಘ್ರಾಣವೆಂಬ ಪಂಚತತ್ತ್ವ.
ಅಲ್ಲಿಹ ಕಲೆ-ಶಾಂತಿಕಲೆ ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Allinda mēle anāhatacakrada
dvādaśadaḷapadma madhyadalliha mantra tatpuruṣamantra.
Alliha pada- vyāpin rūpin arūpin prathama
prathama tējastēja jyōtirjyōti arūpa
anilina adhūma'' vemba hanneraḍu pada.
Illiha varṇa-ka kha ga gha ṅa ca cha ja jha ña ṭa ṭha
emba hanneraḍu varṇa.
Alliha bhuvana-sthalēśvara, sthūlēśvara, śaṅkhakarṇa, kāḷān̄jana,
maṇḍalēśvara, mākūṭa, dviraṇḍa, chaga, canda, sthāṇu, svarṇākṣa.
Bhadrakarṇa, mahālaya, avimukta, rudrakōṭi,
vastrāpada, bhīmēśvara,
mahīndra, aṣṭahāsa, vimalēśvara, nakhala, nākhala,
Karukṣētra, bhairava, kaidāra, mahābala,
madhyamēśvara, māhēndrakēśvara, jalabhēśvara,
śrīśaila, hariścandra, akuliśa, muṇḍi, cārubhūti,
āṣāḍi, pauṣkara, naimiṣa, prabhāsa, amarēśvara,
bhadrakāḷa, vīrabhadra, trilōcana, vipsu, vabha,
vivāmi, tridaśēśvara, triyakṣa, gaṇā
emba nālvatteṇṭu bhuvana.
Alliha tattva-śrōtra, tvakku, cakṣu, jihve,
ghrāṇavemba pan̄catattva.
Alliha kale-śāntikale nōḍā
apramāṇakūḍalasaṅgamadēvā.