Index   ವಚನ - 720    Search  
 
ಇನ್ನು ಪಂಚಾಕ್ಷರಂಗಳ ನಿವೃತ್ತಿಯೆಂತೆಂದಡೆ: ಆ ಪ್ರಣವದ ತಾರಕಾಕೃತಿಯಲ್ಲಿಹ ನಕಾರದಲ್ಲಿ ನಕಾರವಡಗಿತ್ತು ಆ ಪ್ರಣವದ ದಂಡಸ್ವರೂಪದಲ್ಲಿಹ ಮಕಾರದಲ್ಲಿ ಮಕಾರವಡಗಿತ್ತು ಆ ಪ್ರಣವದ ಕುಂಡಲಾಕಾರದಲ್ಲಿಹ ಶಿಕಾರದಲ್ಲಿ ಶಿಕಾರವಡಗಿತ್ತು ಆ ಪ್ರಣವದ ಅರ್ಧಚಂದ್ರಕದಲ್ಲಿಹ ವಕಾರದಲ್ಲಿ ವಕಾರವಡಗಿತ್ತು. ಆ ಪ್ರಣವದ ದರ್ಪಣಾಕಾರದಲ್ಲಿಹ ಯಕಾರದಲ್ಲಿ ಯಕಾರವಡಗಿತ್ತು ನೋಡಾ. ಇದಕ್ಕೆ ಮಹಾವಾತುಲಾಗಮೇ: ನಕಾರಶ್ಚ ಮಕಾರಶ್ಚ ಶಿಕಾರಶ್ಚ ವಕಾರಕಂ ತಥಾ ಯಕಾರಂ ಚೈವ ಮೂಲ ಬೀಜಾಕ್ಷರೇ ಲಯಃ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.