Index   ವಚನ - 779    Search  
 
ಉಕಾರದೊಳಗೆ ಉಕಾರವನರಿಯರು ಉಕಾರದೊಳಗೆ ಅಕಾರವನರಿಯರು ಉಕಾರದೊಳಗೆ ಮಕಾರವನರಿಯರು ಉಕಾರದೊಳಗೆ ಓಂಕಾರವನರಿಯರು ಉಕಾರದೊಳಗೆ ನಿರಾಳನಿರಂಜನ ನಿರಾಮಯ ನಿರಾಮಯಾತೀತವನರಿಯದೆ ಗುರುಲಿಂಗಜಂಗಮವೆಂದು ಸುಳಿದನಾದರೆ ಅವನನಾಚಾರಿ ಪಂಚಮಹಾಪಾತಕ ನೋಡಾ ಅಪ್ರಮಾಣಕೂಡಲಸಂಗಮದೇವಾ.