•  
  •  
  •  
  •  
Index   ವಚನ - 108    Search  
 
ತಾಯಿ ಬಂಜೆಯಾದಲ್ಲದೆ ಶಿಶು ನಷ್ಟವಾಗದು. ಬೀಜ ನಷ್ಟವಾದಲ್ಲದೆ ಸಸಿ ನಷ್ಟವಾಗದು. ನಾಮ ನಷ್ಟವಾದಲ್ಲದೆ ನೇಮ ನಷ್ಟವಾಗದು. ಮೊದಲು ಕೆಟ್ಟಲ್ಲದೆ ಲಾಭದಾಸೆ ಬಿಡದು. ಗುಹೇಶ್ವರನೆಂಬ ಲಿಂಗದ ನಿಜವನೆಯ್ದುವಡೆ, ಪೂಜೆಯ ಫಲ ಮಾದಲ್ಲದೆ ಭವಂ ನಾಸ್ತಿಯಾಗದು.
Transliteration Tāyi ban̄jeyādallade śiśu naṣṭavāgadu. Bīja naṣṭavādallade sasi naṣṭavāgadu. Nāma naṣṭavādallade nēma naṣṭavāgadu. Modalu keṭṭallade lābhadāse biḍadu. Guhēśvaranemba liṅgada nijavaneyduvaḍe, pūjeya phala mādallade bhavaṁ nāstiyāgadu.
Hindi Translation माँ बाँझ बनी तो शिशु नहीं होता। बीज खराब हो तो सस्य नहीं पलता। नाम नष्ट के बिना नेम नष्ट नहीं होता। मूलधन के बिना लाभ की आशा नहीं छोड़ता। गुहेश्वरा लिंग ज्ञान जाने बिना, पूजाफल के बिना भव नास्ति नहीं होता। Translated by: Eswara Sharma M and Govindarao B N
Tamil Translation தாயிடம் தாய்மை இல்லையெனின் குழந்தை தோன்றாது. விதை இல்லையெனின் முளை அரும்பாது. நாமம் இல்லையெனின் நியமமும் இருப்பதில்லை. மூலதனம் இல்லையெனின் இலாப ஆசையுமில்லை. குஹேசுவரலிங்கத்துடன் இணையும் பொழுது பூஜை செய்யும் ஆசை இல்லையெனின் பிறவி ஏற்படாது. Translated by: Smt. Kalyani Venkataraman, Chennai
ಶಬ್ದಾರ್ಥಗಳು ಎಯ್ದುವಡೆ = ಹೊಂದುವಡೆ, ಹೊಂದಬೇಕಾದರೆ; ಗತವಾಗು = ಇಲ್ಲವಾಗು; ನಾಮ = ನಾನು ಕರ್ತೃ, ನಾನು ಭೋಕ್ತೃ ಎಂಬ ಭಾವ; ನೇಮ = ಇದನ್ನು ಮಾಡಬೇಕು, ಇದನ್ನು ಮಾಡಬಾರದು ಎಂಬ ವಿಧಿ ಹಾಗೂ ನಿಷೇಧ; ಮೊದಲು = ಮೂಲಧನ, ಅಸಲು; ಲಿಂಗದ ನಿಜ = ಲಿಂಗದ ಸ್ವರೂಪದ ಅನುಭೂತಿ, ಆತ್ಮಾನುಭವ; Written by: Sri Siddeswara Swamiji, Vijayapura