ಕಾಯವೆಂಬ ಕಲ್ಪಿತವ ಕಳೆದು,
ಪ್ರಾಣವೆಂಬ ಸೂತಕವ ಹರಿದು,
ನಿಜಭಕ್ತಿ ಸಾಧ್ಯವಾದಲ್ಲದೆ ಲಿಂಗಪರಿಣಾಮವನೆಯ್ದಿಸಬಾರದು.
ಅನು ಮಾಡಿದೆ, ನೀವು ಕೈಕೊಳ್ಳಿ ಎಂದಡೆ ಅದೇ ಅಜ್ಞಾನ.
ನಮ್ಮ ಗುಹೇಶ್ವರಲಿಂಗಕ್ಕೆ ಕುರುಹಳಿದು ನಿಜ ಉಳಿದವಂಗಲ್ಲದೆ
ಪದಾರ್ಥವ ನೀಡಬಾರದು ಕಾಣಾ, ಸಂಗನಬಸವಣ್ಣಾ.
Transliteration Kāyavemba kalpitava kaḷedu,
prāṇavemba sūtakava haridu,
nijabhakti sādhyavādallade liṅgapariṇāmavaneydisabāradu.
Anu māḍide, nīvu kaikoḷḷi endaḍe adē ajñāna.
Nam'ma guhēśvaraliṅgakke kuruhaḷidu nija uḷidavaṅgallade
padārthava nīḍabāradu kāṇā, saṅganabasavaṇṇā.
Hindi Translation शरीर जैसा कृत्रिम मिठा कर, प्राण जैसा सूतक फाडकर
निज भक्ति साध्य हुए बिना लिंगपरिणाम मन ढूँढना ।
मैने किया, तुम स्वीकार करो कहे तो वहीं अज्ञान है।
हमारे गुहेश्वर लिंग को चिह्न मिटे सत्य बचे दूसरों को
पदार्थ मत देना देख संगनबसवण्णा ।
Translated by: Eswara Sharma M and Govindarao B N