ಕಾಯವೆಂಬ ಗ್ರಾಮದೊಳಗೊಂದು ಉದರಾಗ್ನಿ
ಹಸಿವು ತೃಷೆ ಅನ್ನ ಪಾನಾದಿಗಳಾಹುತಿಯೆಂಬ
ಹೋಮದ ಕುಳಿಯಿದ್ದು,
ನೇಮಾನೇಮಂಗಳನೆಲ್ಲ ಉಳಿದು ಆಹುತಿಯನಿಕ್ಕಿದರು.
ಕೃಚ್ಚ್ರ ಚಾಂದ್ರಾಯಣ ಮೊದಲಾದ ಷೋಡಶ ಕರ್ಮವೆಂಬ ತಪ,
ಎರಡುನೂರಹದಿನಾರು ತೆರೆದ ನೇಮ, ಅರವತ್ತಾರು ಶೀಲ,
ಎಂಬತ್ತೆಂಟು ವ್ರತವೆಂಬೀ ಚತುರ್ವಿಧ ಪ್ರಾಣಘಾತಕದೊಳಿಲ್ಲ
ಗುಹೇಶ್ವರ ನಿಮ್ಮ ಶರಣ, ಕಂಡಯ್ಯ.
Transliteration Kāyavemba grāmadoḷagondu udarāgni
hasivu tr̥ṣe anna pānādigaḷāhutiyemba
hōmada kuḷiyiddu,
nēmānēmaṅgaḷanella uḷidu āhutiyanikkidaru.
Kr̥ccra cāndrāyaṇa modalāda ṣōḍaśa karmavemba tapa,
eraḍunūrahadināru tereda nēma, aravattāru śīla,
embatteṇṭu vratavembī caturvidha prāṇaghātakadoḷilla
guhēśvara nim'ma śaraṇa, kaṇḍayya.
Hindi Translation शरीर कहने ग्राम में एक उदराग्नि
भूख, प्यास, अन्नपानादि आहुति जैसे होम कुंड था,
नेमनेमादियों को बचाकर आहुति डाले|
कृच्छा चांद्रायण आदि षोडश कर्म जैसे तप,
दो सौ सोलह खुले नेम छेसठ शील,
अटासी व्रत जैसे चतुर्विध प्राणाघात में नहीं
गुहेश्वर तुम्हारा शरण कंडेय्या ।
Translated by: Eswara Sharma M and Govindarao B N