Index   ವಚನ - 8    Search  
 
ಪರಮಪವಿತ್ರ ನಿರ್ಮಲವೆನಿಸಿ, ಕ್ರಿಮಿಕೀಟಕ ಮೃತ್ ಕಾಷ್ಠ ಪಾಷಾಣ ಮಸ್ತಕ ದೃಢಬೀಜಗಳು ಮೊದಲಾದ ಶೋಧಕತ್ವದಿಂದ ಮುಚ್ಚಿ, ಬೈಚಿಟ್ಟು, ಶುಚಿ-ರುಚಿ ಪಾಕವ, ಸತಿ-ಪತಿ, ಪಿತ-ಮಾತೆ, ಗುರು-ಶಿಷ್ಯ, ಪುತ್ರ-ಮಿತ್ರ, ಬಂಧು-ಬಳಗ, ಸಹೋದರರೊಂದೊಡಲಾಗಿ, ಲಿಂಗಜಂಗಮವೆ ತನ್ನ ಮನೆ, ತನ್ನ ಕಾಯಕಂಗಳು, ತನ್ನ ಕರ ವಾಚಂಗಳಿಗೆ ತತ್ಪ್ರಾಣವಾಗಿ, ಜಂಗಮಲಿಂಗದ ಪಾದಪೂಜೆಯಾದರೂ ಸರಿಯೆ, ಲಿಂಗಪೂಜೆಯಾದರೂ ಸರಿಯೆ, ವಿಭೂತಿ ರುದ್ರಾಕ್ಷಿಗಳ ತನ್ನ ಕರದಲ್ಲಾಗಲಿ, ತೊಡೆಯಮೇಲಾಗಲಿ ಇಟ್ಟುಕೊಂಡು, ಲಿಂಗನಿರೀಕ್ಷಣದಿಂದರ್ಚಿಸಿ, ಸ್ನಾನ ಧೂಳನ ಧಾರಣ ಗುರುಮುಖದಿಂದರಿದು ಮಾಡಿದ ಬಳಿಕ, ರುದ್ರಾಕ್ಷಿಗಳ ಛಿನ್ನಭಿನ್ನಗಳ ತೆಗೆದು, ನೂನುಕೂನುಗಳ ನೋಡಿ, ವಿಚಾರತ್ವದಿಂದ ಸಾವಧಾನದೊಳ್ ಸ್ಥಾನಸ್ಥಾನಂಗಳಲ್ಲಿ ಧಾರಣಂಗೈದು ಚರಿಸುವರಡೆ ನಿರವಯಪ್ರಭು ಮಹಾಂತನ ಚಿತ್ಕಳಾಮೂರ್ತಿಯೆಂಬೆ ಕಾಣಾ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.