ಇತ್ತಲಾಗಿ, ಅದೇ ನಿರಾಕಾರಪರಿಪೂರ್ಣ ಪರಶಿವಮೂರ್ತಿಯೆ
ನಿಜಗುರುಲಿಂಗಜಂಗಮಲೀಲೆಯ ಧರಿಸಿ,
ಪಾವನಾರ್ಥವಾಗಿ ಪಂಚಮಹಾಪಾತಕಸೂತಕಂಗಳ
ಬಾಹ್ಯಾಂತರಂಗಳಲ್ಲಿ ಮಹಾಜ್ಞಾನ
ಕ್ರಿಯಾಚರಣದಿಂದ ಕಡಿದು ಕಂಡರಿಸಿ,
ಬಿಡುಗಡೆಯನುಳ್ಳ ಹರಗಣಂಗಳಿಗೆ
ನಿಜೇಷ್ಠಲಿಂಗ ಭಸಿತ ರುದ್ರಾಕ್ಷಿಗಳ ಕಾಯವೆನಿಸಿ,
ಸತ್ಕ್ರಿಯಾಚಾರ ಭಕ್ತಿ ಸಾಧನೆಯ ನಿರ್ವಾಣಪದವಿತ್ತರು ನೋಡಾ.
ಅಲ್ಲಿಂದ ಚಿತ್ಪಾದೋದಕ ಪ್ರಸಾದ ಮಂತ್ರವೆ ಪ್ರಾಣವೆನಿಸಿ,
ಶಿವಯೋಗಾನುಸಂಧಾನದಿಂದ
ಮಹಾಜ್ಞಾನದ ಚಿದ್ಬೆಳಗನಿತ್ತರು ನೋಡಾ.
ಆ ಬೆಳಗೆ ತಾವಾದ ಶರಣಗಣಾರಾಧ್ಯ ಭಕ್ತಮಹೇಶ್ವರರು,
ಅನ್ಯ ಮಣಿಮಾಲೆಗಳ ಧರಿಸಿ,
ಅನ್ಯ ಜಪಕ್ರಿಯೆಗಳ ಮಾಡಲಾಗದು.
ಅದೇನು ಕಾರಣವೆಂದಡೆ :
ಹಿಂದೆ ಕಲ್ಯಾಣಪಟ್ಟಣದಲ್ಲಿ ಚೆನ್ನಮಲ್ಲಿಕಾರ್ಜುನಾರಾಧ್ಯರು,
ಉಡುತಡಿ ಮಹಾದೇವಿಗಳು ಪುರುಷನ ಬಿಡುಗಡೆಯ ಮಾಡಿ,
ವೈರಾಗ್ಯದೊಳ್ ಅಲ್ಲಮಪ್ರಭುವಿದ್ದೆಡೆಗೆ ಬಂದು ಶರಣಾಗತರಾಗಲು,
ಆ ಪ್ರಭುಸ್ವಾಮಿಗಳು ಅವರೀರ್ವರ
ಭಕ್ತಿಜ್ಞಾನವೈರಾಗ್ಯ ಸದಾಚಾರಕ್ರಿಯಾವರ್ತನೆಯ ನೋಡಿ
ಸಂತೋಷಗೊಂಡು,
ಇಂತಪ್ಪ ಸದ್ಧರ್ಮಿಗಳಂ ದಂಡನಾಥ ಮೊದಲಾಗಿ
ಅಕ್ಕನಾಗಾಂಬಿಕೆಯು ಮೊದಲಾದ ಪ್ರಮಥಗಣಾದ್ಯರಿಗೆ
ದರುಶನ ಸ್ಪರುಶನ ಸಂಭಾಷಣೆ
ಪಾದೋದಕ ಪ್ರಸಾದಾನುಭಾವವೆಂಬ
ಷಡ್ರಸಾಮೃತವ ಕೊಡಿಸಬೇಕೆಂದು,
ತಮ್ಮ ಭಾವದ ಕೊನೆಯಲ್ಲಿ ಅಚ್ಚೊತ್ತಿ,
ಹರುಷಾನಂದ ಹೊರಚೆಲ್ಲಿ,
ಆಗವರೀರ್ವರಂ ಕೈವಿಡಿದು ಕಲ್ಯಾಣಪಟ್ಟಣಕ್ಕೆ ಹೋಗಿ,
ಅನಾದಿ ಪ್ರಮಥಗಣಾಧೀಶ್ವರರ
ಸಂದರ್ಶನವಾಗಬೇಕೆಂದು ಕರೆದಲ್ಲಿ,
ಆಗ ಮಹಾದೇವಿಯಮ್ಮನು ಸಂತೋಷಂಗೊಂಡು,
ಹರಹರಾ ಸ್ವಾಮಿ ಅವರಲ್ಲಿ ಸನ್ಮಾರ್ಗ
ನಡೆನುಡಿಗಳೇನೆಂದು ಬೆಸಗೊಳಲು,
ಅವರು ಕೇವಲ ಪರಿಪೂರ್ಣಜ್ಯೋತಿರ್ಮಯ
ಲಿಂಗಜಂಗಮದಲ್ಲಿ ಕೂಟಸ್ಥರಾಗಿ,
ಬಾಹ್ಯಾಂತರಂಗದೊಳ್ ಪರಮಪಾತಕ ಸೂತಕ
ಅನಾಚಾರ ಅಜ್ಞಾನ ಅಪಶೈವ ಅಸತ್ಯವಿರಹಿತರಾಗಿ,
ನಿರ್ವಂಚಕ ನಿಃಪ್ರಪಂಚ ನಿರ್ವಾಣ ನಿಃಕಾಮ ಸತ್ಯಶುದ್ಧಕಾಯಕ
ಸದಾಚಾರ ಕ್ರಿಯಾಜ್ಞಾನಾನಂದ ನಡೆನುಡಿಯುಳ್ಳ
ಸದ್ಧರ್ಮ ಅಪಾತ್ರ ಸತ್ಪಾತ್ರವರಿದ ಶಿವಸನ್ಮಾನಿತರು,
ನಿಜಾನಂದಯೋಗತೂರ್ಯರು,
ಕೇವಲ ಪರಶಿವನಪ್ಪಣೆವಿಡಿದು ಚಿಚ್ಛಕ್ತಿಗಳೊಡಗೂಡಿ
ಪಾವನಾರ್ಥ ಅಷ್ಟಾವರಣ ನಿಜವೀರಶೈವ ಮತೋದ್ಧಾರಕ
ಮಹಿಮರ ಚರಣದ
ದರುಶನಮಾತ್ರದಿಂದಿವೆ ಜ್ಯೋತಿರ್ಮಯ
ಕೈವಲ್ಯಪದವಪ್ಪುದು ತಪ್ಪದುಯೆಂದು
ಅಲ್ಲಮನುಸುರಲು, ಆಗ ಸಮ್ಯಕ್ ಜ್ಞಾನಿ ಮಹಾದೇವಿಯರು
ಸತ್ಕ್ರಿಯಾಮೂರ್ತಿ ಚೆನ್ನಮಲ್ಲಿಕಾರ್ಜುನಗುರುವರನು
ಸಂತೋಷಗೊಂಡು,
ತ್ರಿವಿಧರು ಕಲ್ಯಾಣಕ್ಕೆ ಅಭಿಮುಖವಾಗಲು,
ಆ ಪ್ರಶ್ನೆಯು ಹಿರಿಯ ದಂಡನಾಥಂಗೆ
ಲಿಂಗದಲ್ಲಿ ಪ್ರಸನ್ನವಾಗಲು,
ಆಗ ಸಮಸ್ತಪ್ರಮಥರೊಡಗೂಡಿ,
ಆ ಅಲ್ಲಮರು ಸಹಿತ ತ್ರಿವಿಧರು ಬರುವ
ಮಾರ್ಗಪಥದಲ್ಲಿ ಅಡಿಯಿಡುವುದರೊಳಗೆ,
ಇಳೆಯಾಳ ಬ್ರಹ್ಮಯ್ಯನೆಂಬ ಶಿವಶರಣನು
ಈ ತ್ರಿವಿಧರಿಗೆ ಲಿಂಗಾರ್ಚನಾರ್ಪಣಕ್ಕೆ ಶರಣಾಗತನಾಗಿರಲು,
ಅವರು ಅರ್ಚನಾರ್ಪಣಕ್ಕೆ ಬಪ್ಪದೆ ಇರ್ಪಷ್ಟರೊಳಗೆ
ಹಿರಿದಂಡನಾಥ ಪ್ರಮಥರೊಡಗೂಡಿ,
ಅಲ್ಲಮ ಮೊದಲಾದ ತ್ರಿವಿಧರಿಗೆ ವಂದಿಸಿ,
ಲಿಂಗಾರ್ಚನಾರ್ಪಣಕ್ಕೆ ಶರಣುಶರಣಾರ್ಥಿಯೆನಲು,
ಆಗ ಮಹಾದೇವಿಯಮ್ಮನವರು ಒಂದು
ಕಡೆಗೆ ಕೇಶಾಂಬರವ ಹೊದೆದು,
ಶರಣುಶರಣಾರ್ಥಿ ನಿಜವೀರಶೈವ
ಸದ್ಧರ್ಮ ದಂಡನಾಥ ಮೊದಲಾದ
ಸಮಸ್ತ ಗಣಾರಾಧ್ಯರುಗಳ ಶ್ರೀಪಾದಪದ್ಮಂಗಳಿಗೆಯೆಂದು
ಸ್ತುತಿಸುವ ದನಿಯ ಕೇಳಿ,
ಸಮಸ್ತ ಗಣಸಮ್ಮೇಳವೆಲ್ಲ ಒಪ್ಪಿ ಸಂತೋಷಗೊಂಡು,
ಶರಣೆಗೆ ಶರಣೆಂದು ಬಿನ್ನಹವೆನಲು,
ನಿಮಗಿಂದ ಮೊದಲೆ ಶರಣುಹೊಕ್ಕ ಶಿವಶರಣೆಗೆ
ಏನಪ್ಪಣೆ ಸ್ವಾಮಿಯೆನಲು,
ಆಗ ಆ ಬ್ರಹ್ಮಯ್ಯನು ಅಲ್ಲಮಪ್ರಭು
ಚನ್ನಮಲ್ಲಿಕಾರ್ಜುನ ದಂಡನಾಥ ಮೊದಲಾದ
ಸಮಸ್ತಪ್ರಮಥಗಣ ಸಮ್ಮೇಳಕ್ಕೆ ಶರಣುಶರಣಾರ್ಥಿ,
ಈ ತನು-ಮನ-ಧನವು ನಿಮಗೆ ಸಮರ್ಪಣೆಯಾಗಬೇಕೆಂದು
ಅಭಿವಂದಿಸಲು,
ಆಗ ಕಲಿಗಣನಾಥ ಕಲಕೇತಯ್ಯಗಳು
ನೀವು ನಿಮ್ಮ ಪ್ರಮಥರು ಅರೆಭಕ್ತಿಯಲ್ಲಾಚರಿಸುತ್ತಿಪ್ಪಿರಿ,
ನಿಮ್ಮ ಗೃಹಕ್ಕೆ ನಿರಾಭಾರಿವೀರಶೈವಸಂಪನ್ನೆ
ಮಹಾದೇವಿಯಮ್ಮನವರು ಬರೋದುಯೆಂಥಾದ್ದೊ ನೀವೆ ಬಲ್ಲಿರಿ.
ಆ ಮಾತ ನೀವೆ ವಿಚಾರಿಸಬೇಕೆಂದು ನುಡಿಯಲು,
ಆಗ ಬ್ರಹ್ಮಯ್ಯಗಳು ತಮ್ಮ ಕರ್ತನಾದ
ಕಿನ್ನರಿಯ ಬ್ರಹ್ಮಯ್ಯನ ಕಡೆಗೆ ದೃಷ್ಟಿಯಿಟ್ಟು ನೋಡಲು,
ಆ ಕಿನ್ನರಿಯ ಬ್ರಹ್ಮಯ್ಯನು
ಹರಹರಾ, ಶರಣುಶರಣಾರ್ಥಿ, ನಮಗೆ ತಿಳಿಯದು,
ನಿಮ್ಮ ಕೃಪೆಯಾದಲ್ಲಿ ನಮ್ಮ ಅರೆಭಕ್ತಿಸ್ಥಲವನಳಿದುಳಿದು,
ನಿಮ್ಮ ಸದ್ಧರ್ಮ ನಿಜಭಕ್ತಿಮಾರ್ಗವ ಕರುಣಿಸಿ,
ದಯವಿಟ್ಟು ಪ್ರತಿಪಾಲರ ಮಾಡಿ
ರಕ್ಷಿಸಬೇಕಯ್ಯಸ್ವಾಮಿಯೆಂದು ಅಭಿವಂದಿಸಲು,
ಅಯ್ಯಾ, ನಿಮ್ಮಿಬ್ಬರಿಂದಲೇನಾಯ್ತು?
ಇನ್ನೂ ಅನೇಕರುಂಟುಯೆಂದು ಕಲಿಗಣ ಕಲಕೇತರು ನುಡಿಯಲು,
ಹರಹರಾ, ಪ್ರಭುಸ್ವಾಮಿಗಳೆ ನಿಮ್ಮಲ್ಲಿ ನುಡಿ ಎರಡಾಯಿತ್ತು,
ಅದೇನು ಕಾರಣವೆಂದು ಮಹಾದೇವಿಯಮ್ಮನವರು
ಪ್ರಭುವಿನೊಡನೆ ನುಡಿಯಲು,
ಆಗ ಆ ಪ್ರಭುಸ್ವಾಮಿಗಳು ಅಹುದಹುದು ತಾಯಿ
ನಾವು ನುಡಿದ ನುಡಿ ದಿಟ ದಿಟವು.
ನಿಮ್ಮಂಶವಲ್ಲವಾದಡೆ ನಿಮಗಡಿಯಿಡಲಂಜೆಯೆಂದು ನುಡಿಯಲು,
ಹರಹರಾ, ಹಾಗಾದೊಡೆ ಅವರ ಬಿನ್ನಹಂಗಳ ಕೈಕೊಂಡು
ಅವರಲ್ಲಿರುವ ಅಸತ್ಯಾಚಾರದವಗುಣಗಳ ನಡೆನುಡಿಗಳ ಪರಿಹರಿಸಬೇಕು.
ಮುಸುಂಕೇತಕೆ ಸ್ವಾಮಿಯೆಂದು ಮಹಾದೇವಮ್ಮನವರು ನುಡಿಯಲು,
ಆಗ ಹಿರಿದಂಡನಾಥನು ಹರಹರಾ ನಮೋ ನಮೋಯೆಂದು
ಕಲಿಗಣನಾಥ ಕಲಕೇತರೆ ನಮ್ಮವಗುಣಂಗಳ ಪರಿಹರಿಸಿ,
ನಿಮ್ಮ ಕವಳಿಗೆಗೆ ಯೋಗ್ಯರಾಗುವಂತೆ ಪ್ರತಿಜ್ಞೆಯ ಮಾಡಿ,
ನಮ್ಮ ಬಿನ್ನಪವನವಧರಿಸಿ ಲಿಂಗಾರ್ಚನಾರ್ಪಣಗಳ
ಮಾಡಬೇಕು ಗುರುಗಳಿರಾಯೆಂದು ಅಭಿವಂದಿಸಲು,
ಆ ನುಡಿಗೆ ಸಮಸ್ತಗಣ ಪ್ರಮಥಗಣಾರಾಧ್ಯರೆಲ್ಲ ಅಭಿವಂದಿಸಿ,
ನಮ್ಮರೆಭಕ್ತಿ ನಿಲುಕಡೆಯೇನೆಂದು ಹಸ್ತಾಂಜುಲಿತರಾಗಿ ಇದಿರಿಗೆ ನಿಲಲು,
ಆಗ ಆ ಕಲಿಗಣನಾಥ ಕಲಕೇತಯ್ಯಗಳು ನುಡಿದ ಪ್ರತ್ಯುತ್ತರವು
ಅದೆಂತೆಂದೊಡೆ:
ಅಯ್ಯಾ, ಕೈಲಾಸದಿಂದ ಪರಶಿವಮೂರ್ತಿ ನಿಮಗೆ
ಅಷ್ಟಾವರಣ ಪಂಚಾಚಾರ ಸತ್ಯಶುದ್ಧ ನಡೆನುಡಿ
ವೀರಶೈವಮತ ಸದ್ಭಕ್ತಿ ಮಾರ್ಗವ
ಮರ್ತ್ಯಲೋಕದ ಮಹಾಗಣಂಗಳಿಗೆ ತೋರಿ,
ಎಚ್ಚರವೆಚ್ಚರವೆಂದು ಬೆನ್ನಮೇಲೆ ಚಪ್ಪರಿಸಿ,
ನಿಮ್ಮ ತನುಮನಧನವ ಶ್ರೀಗುರುಲಿಂಗಜಂಗಮಕ್ಕೆ ಸಮರ್ಪಿಸಿ,
ವರಗುರುಲಿಂಗಜಂಗಮದ ಮಹಾಬೆಳಗಿನೊಳಗೆ
ಬನ್ನಿರೆಂದು ಪ್ರತಿಜ್ಞೆಯ ಮಾಡಿ, ಪಂಚಪರುಷವ ಕೊಟ್ಟು,
ಆ ಜಡಶಕ್ತಿಸಮ್ಮೇಳನೆನಿಸಿ ಕಳುಹಿಕೊಟ್ಟಲ್ಲಿ,
ನೀವು ಬಂದು, ಎರಡುತೆರದಭಕ್ತಿಗೆ ನಿಂದುದೆ
ಅರೆಭಕ್ತಿಸ್ಥಲವೆಂದು ನುಡಿಯಲು,
ಆ ಎರಡುತೆರದ ಭಕ್ತಿ ವಿಚಾರವೆಂತೆಂದಡೆ:
ಒಮ್ಮೆ ನಿಮ್ಮ ತನು-ಮನ-ಧನ,
ನಿಮ್ಮ ಸತಿಸುತರ ತನುಮನಧನಂಗಳು
ಶೈವಮತದವರ ಭೂಪ್ರತಿಷ್ಠಾದಿಗಳಿಗೆ ನೈವೇದ್ಯವಾಗಿರ್ಪವು.
ಆ ನೈವೇದ್ಯವ ತಂದು ಶ್ರೀಗುರುಲಿಂಗಜಂಗಮಕ್ಕೆ
ನಮ್ಮ ತನುಮನಧನವರ್ಪಿತವೆಂದು ಹುಸಿ ನುಡಿಯ ನುಡಿದು,
ಎರಡು ಕಡೆಗೆ ತನುಮನಧನಂಗಳ ಚೆಲ್ಲಾಡಿ,
ಅಶುದ್ಧವೆನಿಸಿ ಶುದ್ಧಸಿದ್ಧಪ್ರಸಿದ್ಧಪ್ರಸಾದ
ನಮ್ಮ ತನುಮನಧನಂಗಳೆಂದು,
ಕಾಯಾರ್ಪಣ ಕರಣಾರ್ಪಣ
ಭಾವಾರ್ಪಣವೆಂದು ಒಪ್ಪವಿಟ್ಟು ನುಡಿವಲ್ಲಿ,
ನೀವು ವೀರಶೈವಸಂಪನ್ನರೆಂತಾದಿರಿ?
ನಿಮ್ಮಲ್ಲಿ ಲಿಂಗಾರ್ಚನಾರ್ಪಣವೆಂತಾಗಬೇಕು?
ಹೇಳಿರಯ್ಯ ಪ್ರಮಥರೆಯೆಂದು ನುಡಿಯಲು,
ಆಗ್ಯೆ ಏಳುನೂರಾಯೆಪ್ಪತ್ತು ಅಮರಗಣಂಗಳೆಲ್ಲ ಬೆರಗಾಗಿ,
ಆಹಾ ಹರಹರಾ ಅಹುದಹುದೆಂದು
ಬಂದ ನುಡಿ ತಪ್ಪಿ ನಡೆದೆವೆಂದು ಒಪ್ಪಿ ಒಡಂಬಟ್ಟು,
ಅರೆಭಕ್ತಿ ಮಾಡುವವರ ವಿಚಾರಿಸಿ,
ಕಡೆಗೆ ತೆಗೆದು ಗಣಿತವ ಮಾಡಿದಲ್ಲಿ,
ಮುನ್ನೂರರವತ್ತು ಗಣಂಗಳಿರ್ಪರು.
ಆ ಗಣಂಗಳ ಸಮ್ಮೇಳವ ಕೂಡಿಸಿ ಒಂದೊಡಲಮಾಡಿ,
ನಿಮ್ಮೊಳಗಣ ಪ್ರೀತಿಯೇನೆಂದು
ಮಹಾದೇವಮ್ಮನವರು ನುಡಿದು
ಹಸ್ತಾಂಜಲಿತರಾಗಿ ಬೆಸಗೊಳಲು,
ಆಗ ಮುನ್ನೂರರವತ್ತು ಗಣಂಗಳು
ನುಡಿವ ಪ್ರತ್ಯುತ್ತರ ಅದೆಂತೆಂದಡೆ:
ಹರಹರಾ, ನಾವು ಬಂದ ಬಟ್ಟೆ ಅಹುದಹುದು,
ಇಲ್ಲಿ ನಿಂದ ನಡೆ ಅಹುದಹುದು.
ನಾವು ಕ್ರಿಯಾಮಾರ್ಗವ ಬಿಟ್ಟು
ಮಹಾಜ್ಞಾನಮಾರ್ಗವ ಭಾವಿಸಿದೆವು, ಎಡವಿಬಿದ್ದೆವು,
ತಪ್ಪನೋಡದೆ, ಒಪ್ಪವಿಟ್ಟು ಉಳುಹಿಕೊಳ್ಳಿರಯ್ಯ.
ನಡೆಪರುಷ, ನುಡಿಪರುಷ, ನೋಟಪರುಷ,
ಹಸ್ತಪರುಷ, ಭಾವಪರುಷರೆ
ತ್ರಾಹಿ ತ್ರಾಹಿ, ನಮೋ ನಮೋಯೆಂದು ಅಭಿವಂದಿಸಲು,
ಆಗ ಚೆನ್ನಮಲ್ಲಾರಾಧ್ಯರು,
ನೀವು ತಪ್ಪಿದ ತಪ್ಪಿಗೆ ಆಜ್ಞೆಯೇನೆಂದು ನುಡಿಯಲು,
ಆಗ್ಯೆ ಮುನ್ನೂರರವತ್ತು ಗಣಂಗಳು
ನುಡಿದ ಪ್ರತ್ಯುತ್ತರವದೆಂತೆಂದೊಡೆ:
ಅಯ್ಯಾ, ನಾವು ತಪ್ಪಿದ ತಪ್ಪಿಂಗೆ
ಕ್ರಿಯಾಲೀಲೆಸಮಾಪ್ತಪರ್ಯಂತರವು
ನಾವು ಮುನ್ನೂರರವತ್ತು ಕೂಡಿ,
ನಿತ್ಯದಲ್ಲು ನಿಮಗೆ ಗುರುಲಿಂಗಜಂಗಮಕ್ಕೆ
ಆರಾಧನೆಯ ಮಾಡಿ,
ಕೌಪ ಕಟಿಸೂತ್ರ ಹುದುಗು ಶಿವದಾರ ವಿಭೂತಿ
ವಸ್ತ್ರ ಪಾವುಡ ರಕ್ಷೆ ಪಾವುಗೆಗಳ
ವರುಷಕೊಂದು ಬಿನ್ನಹಗಳ ಸತ್ಯಶುದ್ಧ ಕಾಯಕವ ಮಾಡಿ,
ಋಣಪಾತಕರಾಗದೆ,
ನಿಮ್ಮ ತೊತ್ತಿನ ಪಡಿದೊತ್ತೆನಿಸಿರಯ್ಯಯೆಂದು ಅಭಿವಂದಿಸಲು,
ಆಗ ಅಲ್ಲಮಪ್ರಭು ಮೊದಲಾದ ಘನಗಂಭೀರರೆಲ್ಲ ಒಪ್ಪಿ,
ಶೈವಾರಾಧನೆಗಳಂ ಖ
Art
Manuscript
Music
Courtesy:
Transliteration
Ittalāgi, adē nirākāraparipūrṇa paraśivamūrtiye
nijaguruliṅgajaṅgamalīleya dharisi,
pāvanārthavāgi pan̄camahāpātakasūtakaṅgaḷa
bāhyāntaraṅgaḷalli mahājñāna
kriyācaraṇadinda kaḍidu kaṇḍarisi,
biḍugaḍeyanuḷḷa haragaṇaṅgaḷige
nijēṣṭhaliṅga bhasita rudrākṣigaḷa kāyavenisi,
satkriyācāra bhakti sādhaneya nirvāṇapadavittaru nōḍā.
Allinda citpādōdaka prasāda mantrave prāṇavenisi,
śivayōgānusandhānadinda
mahājñānada cidbeḷaganittaru nōḍā.Ā beḷage tāvāda śaraṇagaṇārādhya bhaktamahēśvararu,
an'ya maṇimālegaḷa dharisi,
an'ya japakriyegaḷa māḍalāgadu.
Adēnu kāraṇavendaḍe:
Hinde kalyāṇapaṭṭaṇadalli cennamallikārjunārādhyaru,
uḍutaḍi mahādēvigaḷu puruṣana biḍugaḍeya māḍi,
vairāgyadoḷ allamaprabhuviddeḍege bandu śaraṇāgatarāgalu,
ā prabhusvāmigaḷu avarīrvara
bhaktijñānavairāgya sadācārakriyāvartaneya nōḍi
santōṣagoṇḍu,Intappa sad'dharmigaḷaṁ daṇḍanātha modalāgi
akkanāgāmbikeyu modalāda pramathagaṇādyarige
daruśana sparuśana sambhāṣaṇe
pādōdaka prasādānubhāvavemba
ṣaḍrasāmr̥tava koḍisabēkendu,
tam'ma bhāvada koneyalli accotti,
haruṣānanda horacelli,
āgavarīrvaraṁ kaiviḍidu kalyāṇapaṭṭaṇakke hōgi,
anādi pramathagaṇādhīśvarara
sandarśanavāgabēkendu karedalli,Āga mahādēviyam'manu santōṣaṅgoṇḍu,
haraharā svāmi avaralli sanmārga
naḍenuḍigaḷēnendu besagoḷalu,
avaru kēvala paripūrṇajyōtirmaya
liṅgajaṅgamadalli kūṭastharāgi,
bāhyāntaraṅgadoḷ paramapātaka sūtaka
anācāra ajñāna apaśaiva asatyavirahitarāgi,
nirvan̄caka niḥprapan̄ca nirvāṇa niḥkāma satyaśud'dhakāyaka
sadācāra kriyājñānānanda naḍenuḍiyuḷḷa
sad'dharma apātra satpātravarida śivasanmānitaru,Nijānandayōgatūryaru,
kēvala paraśivanappaṇeviḍidu cicchaktigaḷoḍagūḍi
pāvanārtha aṣṭāvaraṇa nijavīraśaiva matōd'dhāraka
mahimara caraṇada
daruśanamātradindive jyōtirmaya
kaivalyapadavappudu tappaduyendu
allamanusuralu, āga samyak jñāni mahādēviyaru
satkriyāmūrti cennamallikārjunaguruvaranu
santōṣagoṇḍu,
trividharu kalyāṇakke abhimukhavāgalu,
ā praśneyu hiriya daṇḍanāthaṅge
Liṅgadalli prasannavāgalu,
āga samastapramatharoḍagūḍi,
ā allamaru sahita trividharu baruva
mārgapathadalli aḍiyiḍuvudaroḷage,
iḷeyāḷa brahmayyanemba śivaśaraṇanu
ī trividharige liṅgārcanārpaṇakke śaraṇāgatanāgiralu,
avaru arcanārpaṇakke bappade irpaṣṭaroḷage
hiridaṇḍanātha pramatharoḍagūḍi,
allama modalāda trividharige vandisi,
liṅgārcanārpaṇakke śaraṇuśaraṇārthiyenaluĀga mahādēviyam'manavaru ondu
kaḍege kēśāmbarava hodedu,
śaraṇuśaraṇārthi nijavīraśaiva
sad'dharma daṇḍanātha modalāda
samasta gaṇārādhyarugaḷa śrīpādapadmaṅgaḷigeyendu
stutisuva daniya kēḷi,
samasta gaṇasam'mēḷavella oppi santōṣagoṇḍu,
śaraṇege śaraṇendu binnahavenalu,
nimaginda modale śaraṇuhokka śivaśaraṇege
ēnappaṇe svāmiyenalu,
āga ā brahmayyanu allamaprabhuCannamallikārjuna daṇḍanātha modalāda
samastapramathagaṇa sam'mēḷakke śaraṇuśaraṇārthi,
ī tanu-mana-dhanavu nimage samarpaṇeyāgabēkendu
abhivandisalu,
āga kaligaṇanātha kalakētayyagaḷu
nīvu nim'ma pramatharu arebhaktiyallācarisuttippiri,
nim'ma gr̥hakke nirābhārivīraśaivasampanne
mahādēviyam'manavaru barōduyenthāddo nīve balliri.
Ā māta nīve vicārisabēkendu nuḍiyalu,
āga brahmayyagaḷu tam'ma kartanāda
Kinnariya brahmayyana kaḍege dr̥ṣṭiyiṭṭu nōḍalu,
ā kinnariya brahmayyanu
haraharā, śaraṇuśaraṇārthi, namage tiḷiyadu,
nim'ma kr̥peyādalli nam'ma arebhaktisthalavanaḷiduḷidu,
nim'ma sad'dharma nijabhaktimārgava karuṇisi,
dayaviṭṭu pratipālara māḍi
rakṣisabēkayyasvāmiyendu abhivandisalu,
ayyā, nim'mibbarindalēnāytu?
Innū anēkaruṇṭuyendu kaligaṇa kalakētaru nuḍiyalu,
haraharā, prabhusvāmigaḷe nim'malli nuḍi eraḍāyittu,Adēnu kāraṇavendu mahādēviyam'manavaru
prabhuvinoḍane nuḍiyalu,
āga ā prabhusvāmigaḷu ahudahudu tāyi
nāvu nuḍida nuḍi diṭa diṭavu.
Nim'manśavallavādaḍe nimagaḍiyiḍalan̄jeyendu nuḍiyalu,
haraharā, hāgādoḍe avara binnahaṅgaḷa kaikoṇḍu
avaralliruva asatyācāradavaguṇagaḷa naḍenuḍigaḷa pariharisabēku.
Musuṅkētake svāmiyendu mahādēvam'manavaru nuḍiyalu,
āga hiridaṇḍanāthanu haraharā namō namōyenduKaligaṇanātha kalakētare nam'mavaguṇaṅgaḷa pariharisi,
nim'ma kavaḷigege yōgyarāguvante pratijñeya māḍi,
nam'ma binnapavanavadharisi liṅgārcanārpaṇagaḷa
māḍabēku gurugaḷirāyendu abhivandisalu,
ā nuḍige samastagaṇa pramathagaṇārādhyarella abhivandisi,
nam'marebhakti nilukaḍeyēnendu hastān̄julitarāgi idirige nilalu,
āga ā kaligaṇanātha kalakētayyagaḷu nuḍida pratyuttaravu
adentendoḍe:
Ayyā, kailāsadinda paraśivamūrti nimage
aṣṭāvaraṇa pan̄cācāra satyaśud'dha naḍenuḍi
vīraśaivamata sadbhakti mārgava
martyalōkada mahāgaṇaṅgaḷige tōri,
eccaraveccaravendu bennamēle capparisi,
nim'ma tanumanadhanava śrīguruliṅgajaṅgamakke samarpisi,
varaguruliṅgajaṅgamada mahābeḷaginoḷage
bannirendu pratijñeya māḍi, pan̄caparuṣava koṭṭu,
ā jaḍaśaktisam'mēḷanenisi kaḷuhikoṭṭalli,
nīvu bandu, eraḍuteradabhaktige nindudeArebhaktisthalavendu nuḍiyalu,
ā eraḍuterada bhakti vicāraventendaḍe:
Om'me nim'ma tanu-mana-dhana,
nim'ma satisutara tanumanadhanaṅgaḷu
śaivamatadavara bhūpratiṣṭhādigaḷige naivēdyavāgirpavu.
Ā naivēdyava tandu śrīguruliṅgajaṅgamakke
nam'ma tanumanadhanavarpitavendu husi nuḍiya nuḍidu,
eraḍu kaḍege tanumanadhanaṅgaḷa cellāḍi,
aśud'dhavenisi śud'dhasid'dhaprasid'dhaprasāda
nam'ma tanumanadhanaṅgaḷendu,Kāyārpaṇa karaṇārpaṇa
bhāvārpaṇavendu oppaviṭṭu nuḍivalli,
nīvu vīraśaivasampannarentādiri?
Nim'malli liṅgārcanārpaṇaventāgabēku?
Hēḷirayya pramathareyendu nuḍiyalu,
āgye ēḷunūrāyeppattu amaragaṇaṅgaḷella beragāgi,
āhā haraharā ahudahudendu
banda nuḍi tappi naḍedevendu oppi oḍambaṭṭu,
arebhakti māḍuvavara vicārisi,
kaḍege tegedu gaṇitava māḍidalli,
munnūraravattu gaṇaṅgaḷirparu.Ā gaṇaṅgaḷa sam'mēḷava kūḍisi ondoḍalamāḍi,
nim'moḷagaṇa prītiyē