Index   ವಚನ - 11    Search  
 
ಸಾಕಾರವಾದ ಇಷ್ಟಲಿಂಗಸಂಧಾನದ ಕ್ರಿಯಾರ್ಚನೆ ಜ್ಞಾನಾರ್ಚನೆ ಮಹಾಜ್ಞಾನಾರ್ಚನೆಯ ಜಪತಪಾನುಸಂಧಾನದ ಸದ್ಗುರುಮಾರ್ಗಮಂ ಎಚ್ಚರದಳೆದು, ಅಂತರಂಗ ಬಹಿರಂಗ ಒಂದಾಗಿ, ಭಿನ್ನಕ್ರಿಯಾರ್ಚನಾದಿಗಳನತಿಗಳೆದು ಹೊದ್ದಿಗೆಯ ಹೊದ್ದದೆ, ಕೇವಲ ಅಭಿನ್ನಕ್ರಿಯಾರ್ಚನೆಗಳಲ್ಲಿ ಸನ್ಮೋಹಿಯಾದ ಸದ್ಭಕ್ತಮಹೇಶ್ವರರು ನಿರವಯಪ್ರಭುಮಹಾಂತ ನಿಃಕಳಂಕ ಜಂಗಮಲಿಂಗದಲ್ಲಿ ನೈಷ್ಠೆ ನಿಬ್ಬೆರಗಾಗಿ ನಚ್ಚಿ ಮಚ್ಚಿರ್ಪುದೆ ಘನಕ್ಕೆ ಘನ ಕಾಣಾ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.