Index   ವಚನ - 47    Search  
 
ಪರಮಕೈಲಾಸದ ವಡಬಾಗ್ನಿಮಂಟಪದಲ್ಲಿ ಅನಾದಿಪ್ರಮಥಗಣಾರಾಧ್ಯರು ತಿರಸ್ಕರಿಸಿ ಮಹಾಜ್ಞಾನಾಗ್ನಿಯಿಂದ ದಹಿಸಿದ ಪಂಚಸೂತಕಮಂ, ಪರಮೇಶ್ವರನು ಚಿತ್ಕಾಂತೆಯಾದ ಶಾಂಭವಿಗೆ ಉಪದೇಶಿದನು. ಆಗಮೋಕ್ತ ಸಾಕ್ಷಿ: “ಆದಿಬಿಂದೋದ್ಭವೆ ಬೀಜಂ ಬೀಜಮಧ್ಯಂ ಸ್ಥಿತಂ ಕುಲಃ| ಬೀಜಃ ನಾಸ್ತಿ ಕುಲೋ ನಾಸ್ತಿ ತಸ್ಮೈಗಣಕುಲೋ ಭವೇತ್||” ಎಂದುದಾಗಿ, ಮಹಾಜ್ಞಾನೋದಯದಿಂದ ಪೂರ್ವಜನ್ಮವಳಿದು ಪುನರ್ಜಾತನಾದನಾಗಿ, ಸರ್ವಾಂಗದಲ್ಲಿ ಚಿದ್ರೂಪವಾದ, ಚಿನ್ಮಯ ಲಿಂಗಾಯತ ಸ್ವಾಯತ ಸನ್ನಿಹಿತವಾದವಧಾನ ಸದ್ಧರ್ಮ ಸದ್ಭಕ್ತ ಮಹೇಶ್ವರರಿಗೆ ಜನನಸೂತಕವೆಂಬುದೆ ಪರಮಪಾತಕ ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.