ನಿಜವೀರಶೈವ ಸರ್ವಾಚಾರಮತೋದ್ಧಾರಕ ಪರಿಪೂರ್ಣ
ಗುರುಪಾದತೀರ್ಥ ಲಿಂಗಪಾದತೀರ್ಥ ಚರಪಾದತೀರ್ಥ
ಗಣಶೇಷೋದಕ ಪರಿಪೂರ್ಣೋದಕಾದಿಯಾದ
ಪಾದೋದಕ, ಲಿಂಗೋದಕ, ಜ್ಞಾನೋದಕ,
ಶೇಷೋದಕ, ಸತ್ಯೋದಕವೆಂಬ
ಪರಮಾನಂದಾಬ್ಧಿಯಲ್ಲಿ ಸರ್ವಾಚಾರಕ್ರಿಯಾ
ಶುಚಿರುಚಿ ಪಾಕಪ್ರಯತ್ನ
ನಾನಾ ಕ್ರಿಯಾವಿಧಾನ ಪಾನ್ಯಂಗಳಿಂದ
ಬಾಹ್ಯಾಭ್ಯಾಂತರ ಪರಿಪೂರ್ಣ ಶುದ್ಧಸಿದ್ಧಪ್ರಸಿದ್ಧಪ್ರಸನ್ನಪರಾತ್ಪರ
ನಿರ್ಮಲ ನಿರ್ದೇಹ ನಿಃಕಳಂಕ ನಿರ್ಮಾಯಸ್ವರೂಪರಾದ
ಘನಗಂಭೀರ ಶಿವಯೋಗಸನ್ಮಾರ್ಗಿಗಳಿಗೆ
ರಜಸೂತಕವೆಂಬುದೆ ಪಂಚಪಾತಕ ಕಾಣಾ
ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
Art
Manuscript
Music
Courtesy:
Transliteration
Nijavīraśaiva sarvācāramatōd'dhāraka paripūrṇa
gurupādatīrtha liṅgapādatīrtha carapādatīrtha
gaṇaśēṣōdaka paripūrṇōdakādiyāda
pādōdaka, liṅgōdaka, jñānōdaka,
śēṣōdaka, satyōdakavemba
paramānandābdhiyalli sarvācārakriyā
śuciruci pākaprayatna
Nānā kriyāvidhāna pān'yaṅgaḷinda
bāhyābhyāntara paripūrṇa śud'dhasid'dhaprasid'dhaprasannaparātpara
nirmala nirdēha niḥkaḷaṅka nirmāyasvarūparāda
ghanagambhīra śivayōgasanmārgigaḷige
rajasūtakavembude pan̄capātaka kāṇā
niravayaprabhu mahānta sid'dhamallikārjunaliṅgēśvara.