Index   ವಚನ - 50    Search  
 
ನಿಃಕಳಂಕ ಶ್ರೀಗುರುವಿನ ಕರುಣಕಟಾಕ್ಷದಿಂದ, ತನು ಶುದ್ಧಪ್ರಸಾದವಾದ ಕ್ರಿಯಾಚಾರ ನಡೆ, ಮನ ಸಿದ್ಧಪ್ರಸಾದವಾದ ಜ್ಞಾನಚಾರ ನುಡಿ, ಭಾವ ಪ್ರಸಿದ್ಧಪ್ರಸಾದವಾದ ಭಾವಾಚಾರ ದೃಢ, ಆತ್ಮ ಪರಿಪೂರ್ಣಪ್ರಸಾದವಾದ ಸರ್ವಾಚಾರಸಂಪತ್ತಿನ ಸುಚಿತ್ತ ಸುಬುದ್ಧಿ ನಿರಂಹಕಾರ ಸುಮನ ಸುಜ್ಞಾನ ಸದ್ಭಾವವೆಂಬ ಪರಮ ಪದವಿಯಲ್ಲಿ ಲಿಂಗಭೋಗೋಪಭೋಗ ಸಚ್ಚಿದಾನಂದ ಸನ್ನಿಹಿತ ಸದ್ಭಕ್ತ ಮಹೇಶ್ವರರಿಗೆ ಎಂಜಲಸೂತಕವೆಂಬುದೆ ಪಾತಕ ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.